ಸಿನೆಮಾದಲ್ಲಿ ವಿಲನ್ ಕಂಡರೆ ಓಡಿಹೋಗುವ ನಾಯಕಿ...
ಆರ್. ಮಧುಸೂಧನ್, 9945737427
ಸಿನೆಮಾದಲ್ಲಿ ವಿಲನ್ ಕಂಡರೆ ಓಡಿಹೋಗುವ ನಾಯಕಿ ಹೀರೋ ಕಂಡಾಗ 'ಇನ್ನು ಹತ್ತಿರ ಹತ್ತಿರ ಬರುವೆಯಾ' ಅಂತ ಹಾಡು ಹೇಳ್ತಾಳಲ್ಲ?
ಮದುವೆಯ ನಂತರ 'ದೂರ ದೂರ ಅಲ್ಲೆ ನಿಲ್ಲು ನನ್ನ ದೇವರೇ' ಹಾಡು ಇದ್ದೇ ಇದೆಯಲ್ಲ!
ಲಕ್ಷ್ಮೀ ಮೋಹನ್‌ದಾಸ್ 'ಇಬ್ಬನಿ', ಕಂಕನವಾಡಿ, ಮಂಗಳೂರು
ಭಟ್ರೇ ನಿಮ್ಮ ಉತ್ತರದಿಂದ ಪ್ರೇರಿತಳಾಗಿ ಅಂದುಕೊಂಡದ್ದನ್ನೆಲ್ಲ ಮಾಡಿ ತೋರಿಸಿದರೆ ಭಾರಿ ಅನಾಹುತವಾಗಬಹುದಲ್ಲ?
ಅದನ್ನೆಲ್ಲ ಅನಾಹುತ ಎಂದು ತಿಳಿಯುವಷ್ಟು ಅಮಾಯಕಿ ನೀನಲ್ಲವಲ್ಲ!
ಕೆ.ಎನ್. ನಾರಾಯಣ ರೆಡ್ಡಿ, ಕೆ.ಜಿ.ಎಫ್
ಈಶ್ವರನನ್ನು ಕುರಿತು ತಪಸ್ಸು ಮಾಡಿದ ರಾವಣನಿಗೆ, ಈಶ್ವರ ಪಾರ್ವತಿ ಸಮೇತ ದರ್ಶನ ಕೊಡುವ ಅವಶ್ಯಕತೆ ಏನಿತ್ತು?
'ವಿಥ್‌ಕಪಲ್' ಎಂದು ಈಶ್ವರ ಭಾವಿಸಿದ್ದೇ ಇದಕ್ಕೆಲ್ಲ ಕಾರಣ!
ಮಾಗಡಿ ಶ್ರೀನಿವಾಸ್, ಬಾಳೆಕಟ್ಟೆ, ರಾಮನಗರ ಜಿಲ್ಲೆ, 9902797767
ಇಷ್ಟು ವರ್ಷ ಕಳೆದರೂ ಸೀತೆ, ಸಾವಿತ್ರಿಯರ ಉದಾಹರಣೆಗಳನ್ನೇ ನೀಡುತ್ತಾರಲ್ಲ! ಮುಂದಿನ ಪೀಳಿಗೆಯ ಗತಿ?
ರಕ್ಷಿತಾ, ರಮ್ಯ, ರಾಗಿಣಿಯರು ಸೀತೆ, ಸಾವಿತ್ರಿಯಾದ ಬಳಿಕ ಇವರ ಉದಾಹರಣ ಕೊಡಲಾಗುವುದು!
ವಿ. ಹೇಮಂತಕುಮಾರ್, ಬೆಂಗಳೂರು, 9035992900
ನುಗ್ಗೇಕಾಯಿ ತಿಂದ ದಿನ ನನ್ನವಳು ತುಂಬಾ ಕಾಟ ಕೊಡ್ತಾಳಲ್ಲ ಏಕೆ?
ಒಬ್ಬಳೇ ತಿಂದರೆ ಹೀಗೇ ಆಗುತ್ತದೆ!
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

