ಸಂಪಾದಕೀಯ

ಹುಡುಗ: ಐ ಫೆಲ್ ಇನ್ ಲವ್ ವಿತ್ ಯು...

Published On :

ಹುಡುಗ: ಐ ಫೆಲ್ ಇನ್ ಲವ್ ವಿತ್ ಯು, ದ ಮಿನಿಟ್ ಐ ಸಾ ಯು....ವಿಲ್ ಯು ಮ್ಯಾರಿ ಮಿ?
ಹುಡುಗಿ: ನೀವು ಹೇಳಿದ್ದು ನನಗೆ ಒಂದೂ ಅರ್ಥ ಆಗ್ಲಿಲ್ಲ. ನನಗೆ ಇಂಗ್ಲಿಸ್ ಬರಾಕಿಲ್ಲ!
ಹುಡುಗ: ಏನಿಲ್ಲ ಅಕ್ಕ, ಟೈಂ ಎಷ್ಟಾಯ್ತು ಅಂತ ಕೇಳಿದೆ!
***
ಪ್ರಖ್ಯಾತ ಭಾಷಣಕಾರ: ನಾನು ನನ್ನ ಜೀವನದ ಅತ್ಯಮೂಲ್ಯ ದಿನಗಳನ್ನು ಮಹಿಳೆಯೊಬ್ಬಳ ತೋಳಿನಲ್ಲಿ ಕಳೆದೆ. ಆದರೆ ಆಕೆ ನನ್ನ ಹೆಂಡತಿಯಲ್ಲ! (ಸಭಿಕರೆಲ್ಲರೂ ಅಶ್ಚರ್ಯದಿಂದ ಆತನನ್ನು ನೋಡಿದರು)
ಆಕೆ ನನ್ನ ತಾಯಿ! (ಸಭಿಕರಿಂದ ಭಯಂಕರ ಚಪ್ಪಾಳೆ)
(ಭಾಷಣ ಕೇಳಿದ ಕೋಲ್ಯ, ಇದೇ ಸಾಲುಗಳನ್ನು ಹೆಂಡತಿಯ ಮುಂದೆ ಪ್ರಯೋಗಿಸಬೇಕೆಂದು ಮನದಲ್ಲಿಯೇ ಮಂಡಿಗೆ ತಿಂದ)
ಕೋಲ್ಯ(ಹೆಂಡತಿಯೆದುರು): ನಾನು ನನ್ನ ಜೀವನದ ಅತ್ಯಮೂಲ್ಯ ದಿನಗಳನ್ನು ಮಹಿಳೆಯೊಬ್ಬಳ ತೋಳಿನಲ್ಲಿ ಕಳೆದೆ. ಆದರೆ ಆಕೆ ನನ್ನ ಹೆಂಡತಿಯಲ್ಲ!
(ಕೋಲ್ಯ ಮುಂದಿನ ಸಾಲುಗಳನ್ನು ಮರೆತುಬಿಟ್ಟ! ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದ....)
ನೀತಿ: ಪೇಸ್ಟ್ ಮಾಡುವುದಕ್ಕೆ ಬರದಿದ್ದರೆ, ಕಾಪಿ ಮಾಡಲು ಹೋಗಬೇಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.