ಸ್ಥಿತಪ್ರಜ್ಞ
ಹಿಗ್ಗದ, ಕುಗ್ಗದ, ಬಗ್ಗದ, ಜಗ್ಗದ, ಒಣ ಕಟ್ಟಿಗೆಯ ತುಂಡಿನಂಥವ
ಇವನ ಮನಸ್ಸು ರಬ್ಬರ್‌ನಂತೆ ಸ್ಥಿತಿಸ್ಥಾಪಕ ಗುಣ ಹೊಂದಿರುತ್ತದೆ
ದುಃಸ್ಥಿತಿಯಲ್ಲೂ ಮರುಗದ, ಸೊರಗದ, ಜರುಗದ ಗುಣದವ
ಹೊರಗಿಂದ ಅಜ್ಞ, ಒಳಗೊಳಗೇ ಪ್ರಾಜ್ಞ
ಇವನ ಮನಸ್ಥಿತಿಯೆದುರು ಗೆಲುವೂ ಸೋಲುತ್ತದೆ, ಸೋಲೂ ನಗುತ್ತದೆ
ಬುದ್ಧನಂತೆ ಪ್ರಬುದ್ಧ, ಸಿದ್ಧನಂತೆ ಶುದ್ಧ, ಆದರೂ ಇವನಲ್ಲ ಸಂಸಾರಕ್ಕೆ ಬದ್ಧ,
ಸ್ಥಿತಿಗೆ ತಕ್ಕಂತೆ ಬುದ್ಧಿಯನ್ನು ಸುಸ್ಥಿತಿಗೆ ತಂದುಕೊಳ್ಳಬಲ್ಲವ
ಇವನ ಭಾಷೆಗೆ ಕಾಭಾಷಾ ಎನ್ನುತ್ತಾರೆ. (ಸ್ಥಿತಪ್ರಜ್ಞಸ್ಯ ಕಾಭಾಷಾ...)
ಶತ್ರುವೇ ಎದುರಿದ್ದರೂ ಘರ್ಜಿಸದ (ಮನಮೋಹನ) ಸಿಂಹ..
ಪ್ರಜ್ಞಾಳ ಜೊತೆಗಾರ
ಇವನಿಗೆ ಅಳುವೇ ಬಾರದ ಕಾರಣ ಕರ್ಚೀಫ್‌ನ ಅಗತ್ಯವಿಲ್ಲದವ
(ಎದುರಾ ಎದುರೇ ಸುಳ್ಳಾಡುವ ರಾಜಕಾರಣಿಯನ್ನೂ ಸಹಿಸಿಕೊಳ್ಳುವ) ಎಲ್ಲ ಮತದಾರರೂ ಒಂದರ್ಥದಲ್ಲಿ ಸ್ಥಿತಪ್ರಜ್ಞರೇ
ಪ್ರಜ್ಞೆ ಕಳಕೊಂಡವರೂ ಹೀಗೇ ಕಾಣುತ್ತಾರೆ. ಆದರೆ ಅದು ಪ್ರಜ್ಞಾಪೂರ್ವಕ ಸ್ಥಿತಿಯಲ್ಲ
ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

