ಸಂಪಾದಕೀಯ

ಗಂಗೆಯಲ್ಲಿ ಮುಳುಗಿದರೆ ಪಾಪ ಹೋಗುತ್ತೆ. ಪ್ರೀತಿಯಲ್ಲಿ ಮುಳುಗಿದರೆ?

Published On :


ರಮೇಶ ಭಟ್ ಆವರ್ಸೆ, ಮೈಸೂರು, 9164276058
ಗೃಹಪ್ರವೇಶ ಮಾಡಿ ಹಾಲು ಉಕ್ಕಿಸೋ ಪದ್ಧತಿ ಬದಲು, ಅಲ್ಕೋಹಾಲ್ ಉಕ್ಕಿಸಿದರೆ?
ಫುಲ್ ಟೈಟು, ಆಮೇಲೆ ಫೈಟು.


ಟಿವಿ ಕಲರ್, ಮೈಬಾಲು ಕಲರ್. ಆದ್ರೆ ಜೀಬ್ರಾ ಯಾಕೆ ಇನ್ನೂ ಬ್ಲಾಕ್ ಆ್ಯಂಡ್ ವೈಟ್?
ಅದನ್ನು ಜಗತ್ತಿನ ಅತ್ಯಂತ ಹಿಂದುಳಿದ ಪ್ರಾಣಿ ಎಂದು ಪರಿಗಣಿಸಲಾಗುವುದು!


ವಿ. ಹೇಮಂತಕುಮಾರ, ಬೆಂಗಳೂರು, 9035992900
ಗಂಗೆಯಲ್ಲಿ ಮುಳುಗಿದರೆ ಪಾಪ ಹೋಗುತ್ತೆ. ಪ್ರೀತಿಯಲ್ಲಿ ಮುಳುಗಿದರೆ?
ಪಾಪು ಬರುತ್ತೆ!

ಫ್ಯಾಷನ್ ಡಿಸೈನರ್ ಮಧು, 9945737427
ಮನಸ್ಸಿನಲ್ಲಿ ಆಸೆಗಳನ್ನು, ಕಣ್ಣಲ್ಲಿ ಕನಸುಗಳನ್ನು ಕೊಟ್ಟ ಆ ಚೆಲುವೆ, ಜೀವನದ ಪಯಣದಲ್ಲಿ ಜತೆಯಾಗಿ ಹೆಜ್ಜೆ ಹಾಕಲೇ ಇಲ್ಲವಲ್ಲ?
ಅಷ್ಟೆಲ್ಲಾ ಕೊಟ್ಟಿದ್ದಾಳಲ್ಲ. ಇನ್ನೆಷ್ಟು ಕೊಡಬೇಕು ಮಧು.


ಲಕ್ಷ್ಮೀಬರ್ಕಲಿರಮೇಶ್, ಕಿರಗಂದೂರು, ಮಂಡ್ಯ, 9538786547
ನನ್ನವರು ಶತಮಾನದ ಮಾದರಿ ಗಂಡನಾಗಬೇಕೆನ್ನುತ್ತಾರೆ. ಹಾಗಾಗಬೇಕೆಂದರೆ ಏನು ಮಾಡಬೇಕು?
ನೀವು ಹೇಳಿದಂತೆ ಕೇಳಿದರೆ ಸಾಕು. ಪ್ರಶಸ್ತಿ ಗ್ಯಾರಂಟಿ.

 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.