ಹೆಣ್ಣುಕೊಟ್ಟ ಮಾವ ದೇವರ ಸಮಾನವಂತೆ. ಹೆಣ್ಣುಕೊಟ್ಟ ಅತ್ತೆ?
ಲಕ್ಕೂರು ಎಂ. ನಾಗರಾಜ, 9900538954
ಇಂದಿನ ಕಾಲದ ಯುವತಿಯರ ಡ್ರೆಸ್ನಲ್ಲಿ ಅಲ್ಲಲ್ಲಿ ರಂದ್ರಗಳು ಇರುತ್ತವೆ. ಇದಕ್ಕೆ ಕಾರಣ ಏನಿರಬಹುದು?
ಅವರದ್ದು ಪಾರದರ್ಶಕ ನಿಲುವು ಎಂಬುದರ ಸಂಕೇತ ಅದು.
ಬಿ.ಎಂ. ಪರಶಿವಮೂರ್ತಿ, ವಿಜಯನಗರ, ಬೆಂಗಳೂರು
ಇಷ್ಟು ದಿನ ಕನಸಿನಲ್ಲಿ ಬಿಜೆಪಿಯವರು ಬರುತ್ತಿದ್ದರು. ಈಗ ಕಾಂಗ್ರೆಸ್ನವರು ಬರುತ್ತಿದ್ದಾರೆ. ಇದು ಯಾವುದರ ಸೂಚನೆ?
ಅಧಿಕಾರದಲ್ಲಿರುವವರ ಕನಸು ಮಾತ್ರ ಬೀಳುತ್ತದೆ ಎಂಬುದರ ಸೂಚನೆ.
ಪಿ.ಜಿ. ರಾಜ್ ಶಿವಮೊಗ್ಗ, 9739363071
ಹೆಣ್ಣುಕೊಟ್ಟ ಮಾವ ದೇವರ ಸಮಾನವಂತೆ. ಹೆಣ್ಣುಕೊಟ್ಟ ಅತ್ತೆ?
ಅತ್ತೆ ದೇವರ ದೇವರು.
ಹರಳಹಳ್ಳಿ ಪುಟ್ಟರಾಜು, 9632838088
ಹೆಣ್ಣು- ಗಂಡು ಜತೆಯಾಗಿರಲು ಮದುವೆಯೇ ಆಗಬೇಕೆ?
ಮದುವೆಯಾಗಿಯೂ ಜತೆಗಿಲ್ಲದವರು ಸಾಕಷ್ಟು ಮಂದಿ ಇದ್ದಾರೆ.
ಚಿರಪ್ರಭ, ನಂಜನಗೂಡು, 8553793107
30ಕ್ಕೆ 30 ಕೆಜಿ ಅಕ್ಕಿ ಸಿಗುವಾಗ ದುಡಿಯುವ ಅಗತ್ಯವೇನಿದೆ?
ಕೇವಲ ಅಕ್ಕಿಯನ್ನು ಉಣ್ಣಲಾಗುವುದಿಲ್ಲವಲ್ಲ.
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

