ಸಂಪಾದಕೀಯ

ಹೆಂಡತಿ ಹೇಳಿದ ಹಾಗೆ ಗಂಡ ಕೇಳಬೇಕಾ?

Published On :

ಹೆಂಡತಿ ಹೇಳಿದ ಹಾಗೆ ಗಂಡ ಕೇಳಬೇಕಾ? ಗಂಡ ಹೇಳಿದ ಹಾಗೆ ಹೆಂಡತಿ ಕೇಳಬೇಕಾ?
ಹೆಂಡತಿ ಹೇಳಿದ ಹಾಗೆ ಗಂಡ ಕೇಳಬೇಕು ಅಥವಾ ಗಂಡ ಹೆಂಡತಿ ಹೇಳಿದ ಹಾಗೆ ಕೇಳಬೇಕು!
ಬಿ.ಎಂ. ಪರಶಿವಮೂರ್ತಿ, ವಿಜಯನಗರ, ಬೆಂಗಳೂರು

ಅವಳ ಹೃದಯದ ಮೇಲೆ ನನ್ನ ಮನಸ್ಸಿನ 'ಮೌಸ್‌'ನ ಎಷ್ಟೇ ಕ್ಲಿಕ್ ಮಾಡಿದರೂ ಅವಳ ಹೃದಯದ 'ವಿಂಡೋ' ಓಪನ್ ಆಗ್ತಾನೇ ಇಲ್ವಲ್ಲ?
ವಿಂಡೋ ಕರಪ್ಟ್ ಆಗಿರಬೇಕು!
ಫ್ಯಾಷನ್ ಡಿಸೈನರ್ ಮಧು, 9945737427

ದಾಂಪತ್ಯ ಎಂಬ ರಥದಲ್ಲಿ ಸುಖಕ್ಕಿಂತ ಕಷ್ಠಗಳೇ ಜಾಸ್ತಿ ಅಂತಾನಲ್ಲ?
ಅದು ಅವನ ಅನುಭವ. ನಿನ್ನ ಅನುಭವ ಬೇರೆಯೇ ಆಗಿರಬಹುದು.
ಕಾಳೀಹುಂಡಿ ಶಿವಕುಮಾರ, ಮೈಸೂರು

ಕಾವೇರಿ ವಿವಾದದಲ್ಲಿ ಕೇಂದ್ರ ಸರ್ಕಾರ ಕರ್ನಾಟಕವನ್ನು ಸೊಸೆಯಂತೆ, ತಮಿಳುನಾಡನ್ನು ಮಗಳಂತೆ ಕಾಣಲು ಕಾರಣ?
ಅವರು ಅತ್ತೆ ಸ್ಥಾನದಲ್ಲಿರುವುದು!
ಚಿರಪ್ರಭ ನಂಜನಗೂಡು, 8553793107

ಹುಡ್ಗೀರು ಯಾಕೆ ಟೈಟ್ ಪ್ಯಾಂಟನ್ನೇ ಹಾಕ್ತಾರೆ?
ಹುಡುಗರು ಲೂಸ್‌ಗಳ ಥರ ಆಡೋದ್ರಿಂದ!
ಓಂಚನ್ನೇಶ್, ಅರಬಿಳಚಿ ಕ್ಯಾಂಪ್ ಭದ್ರಾವತಿ

- ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.