ವಾಹನಗಳಲ್ಲಿ 'ಹೆರಿಗೆಗೆ ಉಚಿತ' ಎಂದು ಇರುತ್ತಿತ್ತು...
ವಾಹನಗಳಲ್ಲಿ 'ಹೆರಿಗೆಗೆ ಉಚಿತ' ಎಂದು ಇರುತ್ತಿತ್ತು. ಈಗ 'ಪ್ರೇಮಿಗಳಿಗೆ ಉಚಿತ' ಎಂದು ಇದೆ ಏಕೆ?
ಪ್ರೇಮಿಗಳಿಗೆ ಉಚಿತ ಸೇವೆ ನೀಡಿದರೆ ತಾನೇ ಹೆರಿಗೆ ಪ್ರಯಾಣಿಕರು ಬರೋದು!
ಶಿಲ್ಪಿ ರಮೇಶ್, ಸಂತೇಮಾಳ, ಬನ್ನೂರು
ಹೆಂಗಸರು ಹಿಡಿದುಕೊಳ್ಳುವ ಲಟ್ಟಣಿಗೆಗೆ ಇರುವ ಶಕ್ತಿಯಾದರೂ ಯಾವುದು?
ಲಟ್ಟಣಿಗೆಗೆ ಶಕ್ತಿ ಬರುವುದು ಹಿಡಿದುಕೊಂಡವರು ಯಾರು ಮತ್ತು ಯಾಕೆ ಎಂಬುದನ್ನು ಅವಲಂಬಿಸಿರುತ್ತದೆ.
ಬರ್ಕಲಿರಾಮ ಕಿರಗಂದೂರು, ಮಂಡ್ಯ, 9008741348
ಮುಚ್ಚಿಟ್ಟಷ್ಟೂ ಬಿಚ್ಚಿ ನೋಡುವ ಕುತೂಹಲ ಏಕೆ?
ಮುಚ್ಚಿಟ್ಟದ್ದು ತನಗೆ, ಬಿಚ್ಚಿಟ್ಟಿದ್ದು ಪರರಿಗೆ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ 9632838088
ಸ್ವರ್ಗದಲ್ಲಿ ನಿಜವಾಗಿಯೂ ರಂಭೆ- ಮೇನಕೆಯರು ಇರ್ತಾರಾ?
ನೋಡ್ಕೊಂಡ್ ಬರ್ತೀನಿ ಅಂತ ಹೋದೋರು ವಾಪಸ್ ಬಂದಿಲ್ಲ!
ಗೊರೂರು ನಾಗ, 9480783803
ಇಬ್ಬರು ತೆಲುಗರು ಭೇಟಿಯಾದರೆ ಲೇ-ಔಟ್ ಸೃಷ್ಟಿಯಾಗುತ್ತೆ. ಇಬ್ಬರು ಸ್ಪಾಟ್ ಫಿಕ್ಸಿಂಗ್ ಆಟಗಾರರು ಭೇಟಿಯಾದರೆ?
ವಿವಾದ ಸೃಷ್ಟಿಯಾಗುತ್ತೆ.
ಗೊರೂರು ನಾಗ
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

