ಸಂಪಾದಕೀಯ

ತರಗತಿ

Published On :

ತಪ್ಪು ಮಾಡಿದಾಗ ಶಿಕ್ಷಕರು ಕ್ಲಾಸು ತೆಗೆದುಕೊಳ್ಳುವ ಪ್ಲೇಸು ಈ ಕ್ಲಾಸು
    Classic ಆಗುವ ಮೊದಲು Class- sick ಹಿಡಿಸಿಕೊಳ್ಳಬೇಕು
    ಗತಿಯಿಲ್ಲದೇ ಕಷ್ಟಪಟ್ಟು ಕುಳಿತುಕೊಳ್ಳಬೇಕಾದ ಪ್ರಕೋಷ್ಟ
    ತರಗತಿಗಿಂತ ನಿಮ್ಮ ದರ್ಜೆ ಯಾವುದೆಂಬುದು ಮುಖ್ಯ
    ತರಲೆಗಳೆಲ್ಲ ಒಟ್ಟು ಸೇರಿ ತರಗತಿ ಯಾಕೆ ಬೇಡ ಎಂಬುದನ್ನು ನಿರ್ಧರಿಸುವ ಒಳಾಂಗಣ
    ದಡ್ಡರ ನಿರ್ಮಾಣ ಕೇಂದ್ರ
    ಹೆಚ್ಚು ಅಂಕ ಗಳಿಸಿದವನ ಬಿಂಕ ಪ್ರದರ್ಶನ ಸ್ಥಳ
    ಇಲ್ಲಿಯ ಡೆಸ್ಕ್‌ಗಳನ್ನು ನೋಡಿದರೆ ನಮ್ಮ ವಿದ್ಯಾರ್ಥಿಗಳೆಷ್ಟು ಕಲಾವಿದರೆಂಬುದು ತಿಳಿಯುತ್ತದೆ
    ಮಕ್ಕಳ ಕಲರವ ಮತ್ತು ಟೀಚರ್ ಬೈಗುಳದಿಂದ ಕೂಡಿದ ಕೊಠಡಿ
    ಸರ್ಕಾರೀ ಶಾಲೆಯಾಗಿದ್ದರೆ ಬಯಲೇ ತರಗತಿ, ಆಕಾಶವೇ ಮಹಡಿ
    ತ್ವರಿತಗತಿಯಲ್ಲಿ ಮಕ್ಕಳ ವಿಕಾಸಕ್ಕಾಗಿ ಪಾಲಕರು ಕಳಿಸುವ ಕಲಿಕಾ ಕೇಂದ್ರ
    ಇಲ್ಲಿ ಸರಿಯಾಗಿ ಕುಳಿತವನೇ ಮುಂದೆ ದೊಡ್ಡ ದೊಡ್ಡ ಖುರ್ಚಿಯಲ್ಲಿ ಕುಳಿತುಕೊಳ್ಳಬಲ್ಲ
    ತರಾವರಿ ಮನಸ್ಸಿನ ಮಕ್ಕಳ ತಂದೆ ತಾಯಿಗಳ ತಕರಾರು ಎತ್ತೋದು ಇಲ್ಲೇ
    ಗದ್ದಲದ ಗೂಡು, ಪುಸ್ತಕದ ಹುಳುಗಳ ತವರು
    ತರಗತಿಯಲ್ಲಿ ಚೇಷ್ಟೆ ಮಾಡುತ್ತಲೇ ಬೆಳೆದವನು ಅಧ್ಯಾಪಕನಾದ ಮೇಲೆ ತನ್ನ ತುಂಟ ವಿದ್ಯಾರ್ಥಿಗಳಿಗೆ ಬೈಯ್ಯಲಾರ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.