ಗ್ರಾಹಕ
ಅಂಗಡಿಕಾರನೆಂಬ ಗ್ರಹದ ಸುತ್ತ ಸುತ್ತುವ ಉಪಗ್ರಹ
ವ್ಯಾಪಾರಿಗಳೆಂಬ ನವಗ್ರಹಗಳಿಂದ ಸದಾ ಪೀಡಿಸಲ್ಪಡುವವ
ಹೆಚ್ಚು ಹಣ ತೆತ್ತು ಕಿತ್ತು ಕೊಳ್ಳುವವ
ಹಣಕ ವಾಹಕ
ಇವನನ್ನು ಮೋಡಿ ಮಾಡುವುದರಲ್ಲೇ ಹಲವರ ಹಿತ ಅಡಗಿದೆ
ಇವನ ಬ್ಯಾಗು ತುಂಬಿದರೆ ಹಲವರ ಕಿಸೆ ತುಂಬುತ್ತದೆ
ಕತ್ತರಿ ಪ್ರಯೋಗದ ಮುಖ್ಯ ಗುರಿ
ಸದಾ ಗ್ರಹಣ ಬಡಿದಂತಿರುವವ
ವ್ಯಾಪಾರಿಯ ಬ್ಲೇಡಿಗೆ ತಲೆ ಕೊಡುವವ
ಒಳ್ಳೆಯದೋ ಕೆಟ್ಟದ್ದೋ ಎಂದು ವಿವೇಚಿಸದೇ ಒಟ್ಟಾರೆ ಸ್ವೀಕರಿಸುವವ
ಒಂದಕ್ಕೊಂದು ಫ್ರೀ ಇದೆ ಎಂಬ ಬೋರ್ಡ್ ಕಂಡಲ್ಲಿ ನುಗ್ಗುವವ
ಇವನ ತಲೆಗೆ ಎಲ್ಲಾ ಸೈಜಿನ ಟೋಪಿ ಹೊಂದುತ್ತದೆ
ಮ್ಯಾಕ್ಸಿಮಮ್ ರೀಟೇಲ್ ಪ್ರೇಸನ್ನು ಮಿನಿಮಮ್‌ಗೆ ಕೊಡೆಂದು ಒತ್ತಾಯಿಸುವವ
ಅಂಗಡಿಕಾರನ ಶಿರೋ ಭಕ್ಷಕ
ಎಲ್ಲವನ್ನೂ ಪರೀಕ್ಷಿಸಿ ಸ್ಪರ್ಶಿಸಿ ಬಿಟ್ಟು ಬರುವವ
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

