ಸಮಯ
ಕಲಿಯುಗದಲ್ಲಿ ಕಲಿಯುವುದಕ್ಕೆಂದು ಹೆಚ್ಚು ವ್ಯಯವಾಗುವ ಅಂಶಗಳಲ್ಲಿ ಒಂದು
ನೋಡ ನೋಡುತ್ತಲೇ ಮಾಯವಾಗುವ ಸ್ವಭಾವದ್ದು..
ಟೈಮ್ ಬಾಂಬ್
ಇದು ಬೇರೆಯವರಿಗಾಗಿ ಕಾದು ಟೈಂ ವೇಸ್ಟ್ ಮಾಡುವುದಿಲ್ಲ
ಏನಾದರೂ ಮಾಡುವುದಿದ್ದರೆ ಇದೇ ಸುಸಮಯ. ಮಾಡದೇ ಇರಲು ಯಾವುದಾದರೂ ಆದೀತು
ಸಮಯದ ಜೊತೆ ಹೆಜ್ಜೆ ಹಾಕದವನನ್ನು ಇದು ದರದರ ಎಳೆದುಕೊಂಡು ಹೋಗಿ ಕಾಲನ ಕಾಲುಬುಡಕ್ಕೆ ಬಿಸಾಕುತ್ತದೆ
ಇದು ಯಾರಿಗೂ ಭೇದವೆಣಿಸದ ಸರ್ವ ಸಮಾನತಾವಾದಿ
ಇದರ ದೃಷ್ಟಿಯಲ್ಲಿ ಎಲ್ಲರೂ ಸಮ. ಅದಕ್ಕೇ ಇದು ಸಮ-ಯ
ಇಂಟರ್ನೆಟ್ ಎದುರಿಗಿರುವಾಗ ಇದರ ವೇಗ ಅರಿವಿಗೆ ಬರದೇ ಕಳೆದು ಹೋಗುತ್ತದೆ
ಸಮಯವನ್ನು ಚೆನ್ನಾಗಿ ಬಳಸಿಕೊಂಡು ಸಾಧನೆಯ ಉತ್ತುಂಗಕ್ಕೇರಿದವನನ್ನು ಸಮಯ ಸಾಧಕ ಎನ್ನಬಹುದು
ನಿಮ್ಮ ಜೊತೆಗೆ ನೀವು ಮಾತ್ರ ಇರಬೇಕಾದ ಸಮಯಕ್ಕೆ ಟಾಯ್ಲೆಟ್ ಸಮಯ ಎನ್ನಬಹುದು
ಹೊತ್ತು ಸಾಗಿಸಬೇಕಾದ ಅಗತ್ಯವಿಲ್ಲದ ಹೊತ್ತು ಇದು
ಒಳ್ಳೆಯ ಸಮಯಕ್ಕಾಗಿ ಕಾದು ಕೂತವನಿಗೆ ಅದು ಯಾವತ್ತೂ ಬರುವುದೇ ಇಲ್ಲ
ಕಷ್ಟದ ಸಮಯದ ಒಂದು ನಿಮಿಷವೆಂದರೆ ಅದು ಸುಖ ಸಮಯದ ಒಂದು ತಾಸಿದ್ದಂತೆ
ವಿಶ್ವನಾಥ ಸುಂಕಸಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

