ವಿದ್ಯುತ್
ಸೌಧಗಳೆಲ್ಲ ಬೆಳಕಾಗಲು ಕಾರಣವಾಗುವ ಸೌಧಾಮಿನಿ
ಇದು ಶಾಕ್ ಕೊಡುತ್ತದೆ... ಬಿಲ್ ಮೂಲಕವೂ
ಬೀದಿ ದೀಪಗಳೆಲ್ಲ ಹಗಲಲ್ಲೂ ಶೋಭಾಯಮಾನವಾಗಿ ಬೆಳಗಲು ಮೂಲ ಕಾರಣ
ಪರಮ ವಿಶ್ವಾಸಘಾತಕ ಎಂದು ತಿಳಿದಿದ್ದರೂ ಎಲ್ಲರೂ ಇದರ ಮೇಲೆ ಅವಲಂಬಿತರೇ
ತಂತಿ ಮೂಲಕ ಪ್ರವಹಿಸುವ ಕಾಂತಿ
ಇದಿನ್ನೂ ವಯರ್‌ಲೆಸ್ ಆಗಿಲ್ಲ
ಕೆಲಸಕ್ಕಿಂತ ವಿಶ್ರಾಂತಿಗೇ ಅವಕಾಶ ಹೆಚ್ಚು ಇದಕ್ಕೆ
ಬೆಳಕಿನ ಬೆಡಗಿ, ಮಿಂಚಿನ ಹುಡುಗಿ
ಒಂದಿಷ್ಟು ಮನೆ ಬೆಳಗಲೆಂದು ಅಣೆಕಟ್ಟು ಕಟ್ಟಿ ಮತ್ತೊಂದಿಷ್ಟು ಮನೆ ಮುಳುಗಿಸಿ ಪಡೆದ ಶಕ್ತಿ
ಕೆಲವೊಮ್ಮೆ ಒಂದೇ ಮುಖವನ್ನು ತೋರಿಸುತ್ತದೆ ಸಿಂಗಲ್ ಫೇಸ್ ಮೂಲಕ
ಎಷ್ಟೇ ವಿದ್ವತ್ ಇದ್ದವನಿಂದಲೂ ವಿದ್ಯುತ್ತಿನ ಮನಸ್ಸು ಅರಿಯಲಾಗದು
ಬಂದು ಹೋಗುವ ಗುಣವುಳ್ಳದ್ದರಿಂದ ಇದು ಆಗಂತುಕ
ಇದರ ವಿಷಯದಲ್ಲಿ ಮಾತ್ರ ಎಲ್ಲರೂ ಇಂದಲ್ಲಾ ನಾಳೆ ಬರಬಹುದೆಂಬ ಆಶಾವಾದಿಗಳೇ
ಜುಂ ಜುಂ ಮಾಯಾ...
ನಿಮ್ಮ ಕೆಲಸ ಓವರ್‌ಲೋಡ್ ಇರುವಾಗಲೇ ಲೋಡ್ ಶೆಡ್ಡಿಂಗ್ ಭೂತ ಕಾಡುತ್ತದೆ
ಮಕ್ಕಳ ಪರೀಕ್ಷೆಯ ಸಮಯವೇ ಇದರ ರಜಾ ಅವಧಿ
ಕ್ಷಿಪ್ರಗಾಮಿ, ಸರ್ವವ್ಯಾಪಿ
ವಿಶ್ವನಾಥ ಸುಂಕಸಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

