ವಿದ್ಯುತ್
ಇದರ ವಿನಾ ತೃಣಮಪಿನ ಚಲತಿ
ಹೆಣ್ಣಿನ ಮನಸ್ಸಿನಂತೆ ಚಂಚಲೆ. ಗಮನಾಗಮನವೇ ಇದರ ಸ್ವಭಾವ
ಇದ್ದರೂ ಇಲ್ಲದಿದ್ದರೂ ರೆಂಟ್ ಕಟ್ಟಲೇಬೇಕಾದ ಕರೆಂಟ್
ಇದು ಇರುವಾಗ ಯುಗವೆಲ್ಲ ಕ್ಷಣ, ಇಲ್ಲದಿದ್ದಾಗ ಕ್ಷಣವೆಲ್ಲ ಯುಗ
ಪ್ರಿಯೆಯನ್ನಾದರೂ ಬಿಟ್ಟಿರಬಹುದು, ವಿದ್ಯುತ್ ಇಲ್ಲದಿದ್ದರೆ ಕಷ್ಟ ಕಷ್ಟ
ಸೆಖೆಯ ಬಿಸಿ ತಿಳಿಯುವುದೇ ಇದು ಇಲ್ಲದಿದ್ದಾಗ
ವಿದ್ಯುತ್ ಇಲ್ಲದಿದ್ದರೆ ಮೊಬೈಲ್ ಚಾರ್ಜ್ ಮಾಡಲಾಗುವುದಿಲ್ಲ. ಹಾಗಾಗಿ the power disconnecting the people
ದ್ಯುತಿಯ ವಿಶೇಷಾಂಶ
ಮಿಂಚಿಗೂ ಈ ಹೆಸರಿದೆ. ವಿರಿಂಚಿಯಿಂದಲೂ ಇದನ್ನು ಹಿಡಿದು ನಿಲ್ಲಿಸಲು ಸಾಧ್ಯವಿಲ್ಲ
ಮಿಂಚಿ ಹೋದ ಕರೆಂಟ್ಗೆ ಚಿಂತಿಸಿ ಫಲವಿಲ್ಲ
ಶಾಕ್ ಹೊಡೆದಾಗಲೇ ತಿಳಿಯುವುದು ಇದರ ಪವರ್ರು
ತಂತಿಯಲ್ಲಷ್ಟೇ ಅಲ್ಲ, ನರನರಗಳಲ್ಲೂ ಇದರ ಸಂಚಾರ ಆಗುವುದುಂಟು
ಹಳ್ಳಿಗಳನ್ನು ಇಂದಿಗೂ ಚಿಮಣಿ ದೀಪದಲ್ಲಿರಿಸಿದ್ದು ಇದರ ವಿಶೇಷತೆ
ಇದಕ್ಕೆ ಮೀಟರ್ ಇದೆ...!
ಇದನ್ನು ನಂಬಿಕೊಂಡರೆ ಜೀವನವೇ ಕತ್ತಲು
ಬೆಳಕಿನ ಮೂಲ
ವಿಶ್ವನಾಥ ಸುಂಕಸಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

