ಪ್ರಾಮಾಣಿಕತೆ
ಸಾಮಾನ್ಯವಾಗಿ ದುಃಖಾಂತ್ಯಗೊಳ್ಳುವ ಕತೆ
ಈ ಕತೆಯನ್ನು ಕೇಳುವವರೇ ಇಲ್ಲ
ಕಲಿಯುಗದಲ್ಲಿ ಬೆಲೆಬಾಳದ ಗುಣ
ಈ ಗುಣವನ್ನು ಬೆಳೆಸಿಕೊಂಡರೆ ಜೀವನದುದ್ದಕ್ಕೂ ನೀವು ಬೆಲೆ ತೆರಬೇಕಾಗುತ್ತದೆ
ನಿಮಗಿನ್ನೂ ಇದರ ಮೇಲೆ ನಂಬಿಕೆಯಿದ್ದರೆ ನೀವಿನ್ನೂ ದ್ವಾಪರಯುಗದಲ್ಲೇ ಇದ್ದೀರೆಂದರ್ಥ
ಸರಕಾರೀ ಅಧಿಕಾರಿಗಳಾಗಿಯೂ ಶ್ರೀಮಂತರಾಗಬೇಕೆಂದಿದ್ದರೆ ಈ ಯೋಗ್ಯತೆ ನಿಮ್ಮಲಿರಕೂಡದು
ಪ್ರಮೋಶನ್ ಬೇಗನೇ ಪಡೆದ ಆಸೆ ಇಲ್ಲದವರು ಇದನ್ನು ಅಳವಡಿಸಿಕೊಳ್ಳಬಹುದು
ಮಾಣಿಯ ಪ್ರಮುಖ ಕತೆ
ಉಪ್ಪುಕೊಂಡ ಅಂಗಡಿಗೇ ಎರಡು ಬಗೆಯದಿರುವಿಕೆ
ಇದನ್ನು ಬೋಳೇತನ ಎಂದು ಆಧುನಿಕರು ವ್ಯಾಖ್ಯಾನಿಸುವರು
ಪ್ರಮೋದಕ್ಕಾಗಿಯೂ ಪ್ರಮಾದವೆಸಗದಿರುವಿಕೆ
ಮೋಸ ಮಾಡೋದೇ ಗೊತ್ತಿಲ್ಲದಿದ್ದರೆ ಅದು ಮುಗ್ಧತೆ, ಗೊತ್ತಿದ್ದರೂ ಮಾಡದಿರುವಿಕಯೇ ಪ್ರಾಮಾಣಿಕತೆ
ಸಾರ್ವಜನಿಕ ಕ್ಷೇತ್ರದಲ್ಲಿರುವವರು ಹೊಂದಿರಬೇಕಾದ ಕನಿಷ್ಟ ಅರ್ಹತೆ
ಇದೊಂದಿದ್ದರೆ ಆತ ಸರ್ವಗುಣಸಂಪನ್ನನಿಗೆ ಸಮ
ರಾಜಕೀಯದಲ್ಲಿ ಮೇಲೆ ಬರಲು ಇಚ್ಛಿಸುವವರ ಅಡ್ಡಬರುವ ಗುಣ
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

