ವಾರ್ತೆ
ವಾರ್ತೆ
ಮಾಧ್ಯಮ ಲೋಕದ ಆರದ ಒರತೆ
ನಾರ್ತ್, ಈಸ್ಟ್, ವೆಸ್ಟ್, ಸೌತ್ ನಾಲ್ಕೂ ದಿಕ್ಕುಗಳಿಂದ ಬರುವ ಟಿಜಢಿಡ
ಸದ್ದು ಮಾಡುವ ಸುದ್ದಿ
ಮಧ್ಯಮ ವರ್ಗದವರ ದಾರಿ ತಪ್ಪಿಸುವ ಮಾಧ್ಯಮ
ಇದರ ಮೂಲಕ ಒಳ್ಳೆಯ ಸುದ್ದಿ ಪ್ರಕಟವಾದರೆ ಅದು ಆಕಸ್ಮಿಕ
ಹೃದಯವನ್ನು ಬ್ರೇಕ್ ಮಾಡುವ ಬ್ರೇಕಿಂಗ್ ನ್ಯೂಸ್
ಮಹತ್ತರ ಎಂಬಂತೆ ಬಿತ್ತರಿಸಲ್ಪಡುವ ಮಾಹಿತಿ
ವಿಚಾರವಿದ್ದರೂ ಪ್ರಸಾರವಾಗುವಂಥದ್ದು
ಆಚಾರ ವಿಚಾರಗಳ ಬಗೆಗಿನ ಸಮಾಚಾರ
ಜಾಹೀರಾದ ವಿಷಯಗಳ ಬಗೆಗಿನ ಸಮಾಚಾರ
ವಾರ್ತೆಯನ್ನು ಓದಲು ಹೆಂಗಸರನ್ನೇ ಆಯ್ಕೆ ಮಾಡುತ್ತಾರೆ. ಕಾರಣ ಅವರಿಗೆ ವಾರ್ತಾಲಾಪದಲ್ಲಿ ರೂಢಿ ಇರುತ್ತದೆ
ಇದು ರೇಡಿಯೋವನ್ನು ನೆನಪಿಸುತ್ತದೆ. ನ್ಯೂಸ್ ಎಂದರೆ ಮಾತ್ರ ಟೀವಿ
ಬೇರೆಯವರ ಸುದ್ದಿ ನಮಗ್ಯಾಕೆ ಎನ್ನುವವರಿಗೆ ಇದು ಬೇಕಿಲ್ಲ
ಯಾರದ್ದೋ ಸುದ್ದಿ, ನಮಗೆ ವಾರ್ತೆ
ವಾರ್ತಾ ಇಲಾಖೆಯನ್ನು ಮಹಿಳೆಯರಿಗೆ ವಹಿಸಿದರೆ ಅದರಂಥ ಉತ್ತಮ ಯೋಚನೆ ಇನ್ನೊಂದಿಲ್ಲ
ಜಾಹೀರಾತಿನ ಮಧ್ಯೆ ಮಧ್ಯೆ ಪ್ರಸಾರವಾಗುವ ತುಣುಕು
ಶುದ್ಧಿಗಿಂತ ಸುದ್ದಿ ಮುಖ್ಯ
ಆಕಾಶವಾಣಿ...ವಾರ್ತೆಗಳು. ಓದುತ್ತಿರುವವರು,,,
ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

