ಸಮಯ
ದಿನದಿಂದ ದಿನಕ್ಕೆ ನಮ್ಮನ್ನು ಮುದುಕರನ್ನಾಗಿಸುವ ರೋಗ
ವೃದ್ಧಾಪ್ಯಕ್ಕೆ ತಳ್ಳುವ ಮಹಾಶತ್ರು
ಕಾಲನ ಪಾಶ
ಧಾವಂತದ ಧೀಮಂತ
ಕೂಡಿಡಲಾಗದ ಸಂಪತ್ತು
ಸಮಯಕ್ಕೂ ನಿಧಾನ ಸಾಗುವುದು ಗೊತ್ತು. ಇಂಟರ್ವ್ಯೂ ಎದುರಿಸುವಾಗ ಇದು ತಿಳಿಯುತ್ತದೆ
ಸಮಯದ ಬಗೆಗಿನ ನಮ್ಮ ತಪ್ಪು ಕಮೆಂಟ್ ಎಂದರೆ 'ನನ್ನ ಟೈಂ ಸರಿಯಿಲ್ಲ' ಎಂಬುದು
ಯಾರಿಗೂ ಸಮಯ ಉಚಿತವಲ್ಲ - ದೂರವಾಣಿಯಲ್ಲಿ ಮಾತನಾಡುವಾಗ
ಟೈಮ್‌ಪಾಸ್ ಮಾಡದಿದ್ದರೂ ಟೈಂ ಪಾಸ್ ಆಗುತ್ತದೆ
ಗಡಿಯಾರದಲ್ಲಿ ಸ್ಟಾಪ್ ಆಗಬಹುದು. ಸಮಯವಲ್ಲ.
ಸಮಯವೇ ಇಲ್ಲ ಎನ್ನುವವ ಸಮಯ ಮಾಡಿಕೊಳ್ಳಲು ಸಮಯ ಕೊಡುತ್ತಿಲ್ಲ ಎಂದು ಭಾವಿಸಬಹುದು
ಉತ್ತಮ ಸಮಯಕ್ಕೆ ಸುಸಮಯ ಎನ್ನುವುದಾದರೆ ಸೂಸು ಮಾಡುವ ಸಮಯಕ್ಕೆ 'ಸೂಸುಮಯ' ಎನ್ನಬಹುದು
ಎಲ್ಲದಕ್ಕೂ ಸಮಯ ಕೂಡಿಬರಬೇಕು. ಕೂಡುವುದಕ್ಕೂ...
ಸಮಯದ ಮಹತ್ವ ಅರಿಯದ ಅಮಾಯಕನಿಗೆ ಸಮಾಯಕ ಎನ್ನಬಹುದು
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

