ಸ್ನೇಹಿತನ ಮುನಿಸಿಗೂ ಪ್ರೇಯಸಿಯ ಮುನಿಸಿಗೂ ವ್ಯತ್ಯಾಸ?
ಲಕ್ಕೂರು ಎಂ. ನಾಗರಾಜ್, 9900 538 954
ಇತ್ತೀಚಿನ ದಿನಮಾನಗಳಲ್ಲಿ ಹುಡುಗ -ಹುಡುಗಿಯರ ಹೇರ್‌ಸ್ಟೈಲ್‌ನ ರಹಸ್ಯ ಏನು ಅಂತಾ ನಮಗೆ ಹೇಳ್ತೀರಾ ಸರ್?
ಹೇರ್‌ಸ್ಟೈಲ್ ಅವರ ಲೈಫ್‌ಸ್ಟೈಲ್‌ನಷ್ಟೇ ವಿಚಿತ್ರವಾಗಿರುತ್ತೆ!
ಕೊಕ್ಕಡ ವೆಂಕಟ್ರಮಣಭಟ್, ಮಂಡ್ಯ 9972 448183
"ಪ್ರಳಯ ಆಗೇ ಆಗುತ್ತೆ ಬರೆದಿಟ್ಟುಕೊಳ್ಳಿ" ಎಂದು ನಾಲಿಗೆ ಹರಿ ಬಿಡುತ್ತಿದ್ದ ಜ್ಯೋತಿಷಿಗಳೆಲ್ಲ ಎಲ್ಲಿಗೆ ಹೋಗಿದ್ದಾರೆ ಸ್ವಾಮಿ!?
ಅವರೀಗ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಾಣಿಗಳಿಗೆ ಭವಿಷ್ಯ ಹೇಳ್ತಿರ್ತಾರೆ!
ಎಂ.ಬಿ.ಕೃಷ್ಣಮೂರ್ತಿ, ಚಾಮರಾಜನಗರ
ಸ್ನೇಹಿತನ ಮುನಿಸಿಗೂ ಪ್ರೇಯಸಿಯ ಮುನಿಸಿಗೂ ವ್ಯತ್ಯಾಸ?
ಸ್ನೇಹಿತನ ಮುನಿಸು 'ಸಾರಿ' ಹೇಳಿದಾಕ್ಷಣ ಮುಗಿಯುತ್ತೆ, ಪ್ರೇಯಸಿಯ ಮುನಿಸು 'ಸ್ಯಾರಿ' ಕೊಟ್ರೂ ಮುಗಿಯಲ್ಲ!
ಪ್ರಮೋದ್‌ಕುಮಾರ್ ಜಿ.ಆಳವಾಗಿ ಪ್ರೀತಿಸುವುದೆಂದರೆ ಅರ್ಥ?
ಕೆಸರನ್ನು ಮೈಗೆ ಮೆತ್ತಿಕೊಳ್ಳುವುದು!
ರವಿಕುಮಾರ್. ಜಿ.ಬಿ. 944966 9897
ಸಿನಿಮಾದಲ್ಲಿ ಪ್ರೀತಿಯಿಂದ ಹೆಂಡತಿಯನ್ನು ನೋಡಿಕೊಳ್ಳುವ ನಾಯಕನ ನಿಜಜೀವನದಲ್ಲಿ ಏಕೆ ರಗಳೆ?
ಅಲ್ಲಿ ಸೆಟ್ಟಿಂಗ್ ಇರುತ್ತೆ, ಇಲ್ಲಿ ಅಕ್ಕ-ಪಕ್ಕದವರ 'ಫಿಟ್ಟಿಂಗ್' ಇರುತ್ತಲ್ಲ!
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

