ಸಂಪಾದಕೀಯ

ಗಂಡ ಹೆಂಡಿರ ನಡುವಿನ ಮುನಿಸನ್ನು ಜಗಳ ಅನ್ನೋದು ನ್ಯಾಯವೇ?

Published On :

ಹರಳಹಳ್ಳಿ ಪುಟ್ಟರಾಜು, 9632838088
ಗಂಡ ಹೆಂಡಿರ ನಡುವಿನ ಮುನಿಸನ್ನು ಜಗಳ ಅನ್ನೋದು ನ್ಯಾಯವೇ?
ಕೆಲವರು ಜಗಳವಡುವುದನ್ನು ನೋಡಿದರೆ ಅದೇ ಪ್ರೀತಿಯೇನೋ ಎಂಬ ಅನುಮಾನ ಮೂಡುತ್ತದೆ.

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ನೀವು ಸರ್ವಸಂಗ ಪರಿತ್ಯಾಗಿಯಾಗಿ ಈಗ ಬಾಣ ಬಿಡುತ್ತಿರುವಿರಾ?
ನಾನು ಸರ್ವ'ಸಂಘ' ಪರಿತ್ಯಾಗಿ ಅಷ್ಟೇ.
ರಮೇಶ ಭಟ್ ಆವರ್ಸೆ, ಮೈಸೂರು, 9164276058
ಯೋಗರಾಜ ಭಟ್ರ 'ಡ್ರಾಮಾ'ಕ್ಕೂ ರಾಜಕೀಯ ನಾಯಕರ 'ಡ್ರಾಮಾ'ಕ್ಕೂ ಏನು ವ್ಯತ್ಯಾಸ?
ಒಂದನ್ನು ದುಡ್ಡುಕೊಟ್ಟು ನೋಡಬೇಕು. ಇನ್ನೊಂದು ಪುಕ್ಕಟೆ!

ಮನು ವಿ. ದಾವಣಗೆರೆ, 9739259427
ರಾತ್ರಿ ಮೂಡುವ ಕನಸುಗಳಿಗೆ ತುಂಬಾ ಹುಡುಗಿಯರು ಮರುಳಾಗುತ್ತಾರಲ್ಲಾ?
ತಪ್ಪು ತಪ್ಪು. ರಾತ್ರಿಯ ಕನಸು ತೋರಿಸಿಯೇ ಅವರು ಹುಡುಗರನ್ನು ಮರುಳುಮಾಡೋದು!

ಗಂಗರಾಜ ಶಿರವಾರ, 9242215238
ಇತ್ತೀಚೆಗೆ ಬೆತ್ತಲೆ ಪ್ರಪಂಚದ 'ಪ್ರತಾಪ್‌ಸಿಂಹ' ಘರ್ಜಿಸೋದು ಬಿಟ್ಟು ಹೊಗಳೋಕೆ ಶುರುಮಾಡಿದ್ದಾರಲ್ಲಾ?
ಒಳ್ಳೆ ಕೆಲಸ ಮಾಡಿದಾಗ ಹೊಗೊಳೋನಿಗೆ ಕೆಟ್ಟದ್ದು ಮಾಡಿದಾಗ ಬಯ್ಯೋ ಅಧಿಕಾರವೂ ಇರುತ್ತೆ.

- ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.