ನಿರಾಭರಣ ಸುಂದರಿಯೆಂದು ಯಾರನ್ನು ಕರೆಯಬಹುದು?
ಬರ್ಕಲಿರಾಮ ಕಿರಂಗಂದೂರು, ಮಂಡ್ಯ
ನಿರಾಭರಣ ಸುಂದರಿಯೆಂದು ಯಾರನ್ನು ಕರೆಯಬಹುದು?
ಬಿಪಾಷಾಳನ್ನು. ಆಭರಣ ಬಿಡಿ, ಬಟ್ಟೆಯನ್ನೂ ಕಡಿಮೆ ಹಾಕಿಕೊಳ್ಳುತ್ತಾಳೆ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಒಬ್ಬನ ಪ್ರೀತಿಸಿ ಮತ್ತೊಬ್ಬನ ವಿವಾಹವಾಗಲು ಹೊರಟ ಕೆಲ ಹುಡ್ಗೀರು, ತನ್ನ ಪ್ರಿಯತಮನಿಗೆ 'ನಿಂಗೆ ನನಗಿಂತಲೂ ಒಳ್ಳೇ ಹುಡ್ಗಿ ಸಿಗ್ತಾಳೆ' ಎಂದು ಹೇಳ್ತಾರಲ್ಲ?
ಮಕ್ಕಳ ಕೈಲಿದ್ದ ಚಾಕಲೇಟು ಕೈತಪ್ಪಿ ಬಿದ್ದುಹೋದ್ರೆ ಬೇರೆ ತೆಗಿಸ್ಕೋಡ್ತೀನಿ ಅಳ್ಬೇಡ ಅಂತ ಹೇಳ್ತಾರಲ್ಲ ಹಾಗೆ!
ಉಜ್ಜನಿ ಜಲೇಂದ್ರ, 8971857200
'ಕೇಳ್ರಪ್ಪೋ ಕೇಳಿ' ಈ ಶಿರ್ಷಿಕೆಯಲ್ಲಿ ಭಟ್ರು ಸಿನಿಮಾ ಮಾಡಿದರೆ ಹೇಗೆ?
ಕೆಲವು ಸಿನಿಮಾ ನೋಡಿ ಜನ 'ಓಡ್ರಪ್ಪೋ ಓಡಿ' ಅಂದ್ರಂತೆ!
ಮನು ವಿ. ದಾವಣಗೆರೆ, 9739259427
ಹುಡುಗೀರು ಹೆಚ್ಚಾಗಿ ಜಡೆ ಹಾಕಲು ಇಷ್ಟಪಡುವುದಿಲ್ಲ ಏಕೆ?
ಈಗಿನ ಹುಡ್ಗೀರಿಗೆ ಜಡೆ ಹಾಕುವಷ್ಟು ಉದ್ದದ ಕೂದಲೇ ಇರೋಲ್ವಲ್ಲ!
ಲಕ್ಕೂರು ನಾಗರಾಜ, ಕೋಲಾರ, 9900538954
ಮದುವೆ ಕಲ್ಯಾಣ ಮಂಟಪದಲ್ಲಿ ನಡೆದಾಗ ಊಟ ಹಾಕಲೇ ಬೇಕಾ? ತಾಳಿ ಕಟ್ಟಲೇಬೇಕಾ?
ಭಲೇ ಕಿಲಾಡಿ ನೀನು. ಫಸ್ಟ್‌ನೈಟಲ್ಲೇ ಮದುವೆ ಮುಗ್ಸೋ ಹಂಗಿದೀಯಾ!
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

