ಸಂಪಾದಕೀಯ

ಸೆಲ್ ಫೋನ್ ದುಬಾರಿ

Published On :

ಕಳೆದ ಮೂರು ವರ್ಷಗಳಿಂದಲೂ ಸೆಲ್ ಫೋನ್ ಜನಸಾಮಾನ್ಯರಲ್ಲೂ ಬಹುಮಂದಿಗೆ ಒಂದು ಉಪಯುಕ್ತವಾದ, ವರದಂತಿದ್ದ ಸಾಧನವಾಗಿತ್ತು. ಸೆಲ್‌ಫೋನ್‌ಗಳ ಬೆಲೆಗಳೂ ಇಳಿದಿದ್ದವು, ಫೋನ್ ಕರೆಗಳ ದರಗಳೂ ತುಂಬಾ ಕಡಿಮೆ ಎನ್ನುವ ಮಟ್ಟದಲ್ಲೇ ಇದ್ದವು.
ಇದಕ್ಕೆ ಕಾರಣ ಹಿಂದೆ, ಎರಡನೇ ತಲೆಮಾರಿನ ತರಂಗ ಗುಚ್ಛಗಳ ಹಂಚಿಕೆಯ ಕಾಲದಲ್ಲಿ ಸೆಲ್ ಫೋನ್ ಕಂಪೆನಿಗಳಿಗೆ ಅಗ್ಗದ ದರದಲ್ಲಿ ಗುತ್ತಿಗೆ ಸಿಗುವಂತಹ ನೀತಿಯನ್ನು ಅನುಸರಿಸಿದ್ದೇ. ಈ ವಿಚಾರದ ಗರ್ಭದಲ್ಲೇ ಭ್ರಷ್ಟಾಚಾರ ಅಡಗಿತ್ತು ಎನ್ನುವ ದೂರಿನ ವಿಚಾರ ಬೇರೆ. ಆದರೆ ಸೆಲ್ ಫೋನ್ ಬಳಕೆದಾರರ ಪಾಲಿಗೆ ಈ ಸಾಧನ ಒಂದು ವರದ ರೂಪದಲ್ಲೇ ಇತ್ತು. ಈಗ ಕೆಲವು ಸೆಲ್ ಫೋನ್ ಕಂಪೆನಿಗಳು ಕರೆ ದರಗಳನ್ನು ಹೆಚ್ಚಿಸಲು ತೀರ್ಮಾನಿಸಿವೆ. ನೇರವಾಗಿ ಕರೆದರಗಳನ್ನೇ ಏರಿಸುವುದಕ್ಕೆ ಬದಲಾಗಿ, ಇದುವರೆಗೂ ಚಾಲ್ತಿಯಲ್ಲಿದ್ದ ಕೆಲವು ರಿಯಾಯಿತಿ - ವಿನಾಯಿತಿಗಳನ್ನು ರದ್ದು ಪಡಿಸುವ ನಿರ್ಧಾರವನ್ನು ಪ್ರಕಟಿಸಿರುವುದರಿಂದ ವಸ್ತುಶಃ ಕರೆಗಳ ದರ ಶೇಕಡಾ 30 ರಷ್ಟು ಹೆಚ್ಚಾಗಲಿದೆ ಎಂದು ಅಂದಾಜು.  ನಿಜ. ಈ ನಿರ್ಧಾರವನ್ನು ಪ್ರಕಟಿಸಿರುವುದು ಕೆಲವೇ ಕಂಪೆನಿಗಳು. ಆದರೆ ಇಂತಹ ಪ್ರಕ್ರಿಯೆ ಸಾಂಕ್ರಾಮಿಕ. ಇನ್ನುಳಿದ ಕಂಪೆನಿಗಳೂ ಇದೇ ಹಾದಿಯನ್ನು ತುಳಿಯುವುದು ಸಹಜವಾಗಿ ನಿರೀಕ್ಷಿಸಬಹುದಾದ ಕ್ರಮ.
ಅಕ್ಕಿ, ರಾಗಿ, ಹಾಲಿನ ಬೆಲೆಗಳು ಏರಿವೆ. ವಿದ್ಯುತ್ ಹಾಗೂ ನೀರಿನ ದರಗಳೂ ಏರುವ ಸಂಭವವಿದೆ. ಇದರ ಜತೆಯಲ್ಲೇ ಸೆಲ್‌ಫೋನ್ ಕರೆಗಳ ದರಗಳೂ ಏರಿದರೆ ಶ್ರೀಸಾಮಾನ್ಯನ ಜೀವನ ದುರ್ಭರವಾಗಲಿದೆ. ಅದನ್ನು ಸಹಿಸಿಕೊಳ್ಳಲೇ ಬೇಕು. ಬೇರೆ ಮಾರ್ಗವಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.