ಸಾವು
ನಿಮ್ಮಿಂದ ಸಾಲ ಕೊಂಡವರ ಸಾಲವನ್ನು ಮನ್ನಾ ಮಾಡುವ ಯೋಜನೆ
ಧನವಿಲ್ಲದವರು ನಿತ್ಯ ಬಯಸುವ ನಿಧನ
ಮರದಿಂದ ಕೆಳಗೆ ಬಿದ್ದರೆ ಅಪ್ಪುವ ಮರಣ
ಸೂತಕದ ದ್ಯೋತಕ
ಕೆಲವೊಂದರ ಅನುಭವವನ್ನು ಬೇರೆಯವರ ಬಳಿ ಹಂಚಿಕೊಳ್ಳಲಾಗುವುದಿಲ್ಲ, ಅದರಲ್ಲಿ ಇದೂ ಒಂದು
ಈ ವಿಷಯದಲ್ಲಿ ಉಪನ್ಯಾಸ ಮಾಡುವವರೆಲ್ಲ ಅನುಭವಿಗಳೇ
ಕೊಲೆಗಾರನಿಗೆ ಕರೆಯಬಹುದಾದ ಮತ್ತೊಂದು ಹೆಸರು-ಸಾವಾಡಿಗ
ಇದೊಂದು ಗುಣಪಡಿಸಲಾಗದ ಕಾಯಿಲೆ
ಮಾನ ಕಳೆದುಕೊಳ್ಳೋದು ನಿಜವಾದ ಸಾವು
ಕಸುವು ತೀರಿದ ಮೇಲೆ ಅಸುವು ನೀಗುವುದಕೆ ಈ ಹೆಸರು
ನನ್ನ ಸಾವು ಹೇಗಿರಬೇಕೆಂದುನಿರ್ಧರಿಸಿದರೆ ಬದುಕು ಹೇಗಿರಬೇಕೆಂದು ನಿರ್ಧರಿಸುವುದು ಸುಲಭ
ಇದು ಎಲ್ಲರ ಹುಟ್ಟುಗುಣ, ಆಜನ್ಮ ಸಿದ್ಧ ಹಕ್ಕು
ಆತ್ಮಕ್ಕೆ ಸಾವಿಲ್ಲ, ಸಾವಿಗೆ ಆತ್ಮವಿಲ್ಲ
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

