ಮೊಬೈಲ್ ಫೋನ್ ಮೂಲಕವೇ ಪರಿಚಯವಾದ ಗೆಳತಿ
ಓಂ ಚೆನ್ನೇಶ್ ಅರಬಿಳಚಿ ಕ್ಯಾಂಪ್, 9900739725
ಮೊಬೈಲ್ ಫೋನ್ ಮೂಲಕವೇ ಪರಿಚಯವಾದ ಗೆಳತಿ ಫೋನ್ ಮಾಡದೇ ಬರೀ ಮೆಸೇಜ್ ಮಾಡ್ತಾಳಲ್ಲ?
ಫ್ರೀ ಪ್ಯಾಕೇಜ್ ಕೊಟ್ಟಿರೋದು ಬರೀ ಎಸ್ಸೆಮ್ಮೆಸ್‌ಗಳಿಗೆ ಮಾತ್ರ ಅನ್ಸುತ್ತೆ!
ಪೇಂಟರ್ ಪಾಪು, ಸಂತೇಮರಹಳ್ಳಿ 9008877712
ಸೊಸೆಗೆ ಇರೋ ಬೆಲೆ ಅತ್ತೆಗೆ ಇರೊಲ್ಲ ಅಂತ ನನ್ನ ಅನಿಸಿಕೆ...
ಸೊಸೆಯಾಗಿದ್ದಾಗ ಬೆಲೆ ಪಡೆದುಕೊಂಡಿರುತ್ತಾರಲ್ಲ, ಪರ್ವಾಗಿಲ್ಲ ಬಿಡು.
ವಿ. ಹೇಮಂತಕುಮಾರ, 9035992900
ಇಲ್ಲೊಬ್ಬಳು ನಿನ್ನ ಆಸ್ತಿ, ಅಂತಸ್ತು, ಹಣ, ಒಡವೆ ಬೇಡ. ನಿನ್ನ ಪ್ರೀತಿ ಬೇಕು ಅಂತಿದ್ದಾಳಲ್ಲ?
ಇತ್ತೀಚೆಗೆ ಯಾವ ಎಮೋಷನಲ್ ಸಿನಿಮಾ ನೋಡಿದ್ದು ಅಂತ ಕೇಳು!
ಕೆ. ಎಂ. ಲಿಂಗರಾಜು 9916021365
'ಮೌನ ಮೋಹನ ಸಿಂಗ್' ಮನಮೋಹಕವಾಗಿ ಮಾತನಾಡುವುದು ಯಾವಾಗ?
ಈ ಪ್ರಶ್ನೆಗೂ ಮೌನವೇ ಉತ್ತರ!
ಬರ್ಕ್‌ಲಿ ರಮೇಶ, ಮಂಡ್ಯ
ಟವರ್ ಇದ್ರೆ ಮೊಬೈಲ್‌ಗೆ, ಪವರ್ ಇದ್ರೆ ಮನುಷ್ಯನಿಗೆ ಖುಷಿ. ಲವ್ ಇದ್ರೆ ಯಾರಿಗೆ ಖುಷಿ?
ಕಾಫಿ ಡೇ ಮಂದಿಗೆ!
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

