ರಾಜ್ಯ ರಾಜಕೀಯ ಸ್ಫೋಟ
ಇದುವರೆಗೂ ಪತ್ರಿಕಾ ಹೇಳಿಕೆಗಳು, ಅಲ್ಲಿ- ಇಲ್ಲಿನ ಭಾಷಣಗಳಿಗೇ ಸೀಮಿತವಾಗಿದ್ದ ರಾಜ್ಯದ ಬಿಜೆಪಿ-ಕೆಜೆಸಿ ನಡುವಣ ರಾಜಕೀಯದಲ್ಲಿ ಬುಧವಾರ ಸ್ಪಷ್ಟವಾದ ಬೆಳವಣಿಗೆಗಳನ್ನು ನಿರೀಕ್ಷಿಸುವುದಕ್ಕೆ ಈಗ ಅವಕಾಶವಾಗಿದೆ.
ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಚಿವ ಸಿ.ಎಂ. ಉದಾಸಿ ಅವರು ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡುವ ನಿರ್ಧಾರವನ್ನು ಬಹಿರಂಗವಾಗಿಯೇ ಪ್ರಕಟಿಸಿದ್ದಾಗಿದೆ. ಕಳೆದ ಸಚಿವ ಸಂಪುಟದ ಸಭೆಗೆ ಶೋಭಾ ಕರಂದ್ಲಾಜೆ ಬರಲಿಲ್ಲ. ಸಭೆಯಲ್ಲಿ ಪಾಲುಗೊಂಡ ಸಿ.ಎಂ. ಉದಾಸಿ ಅವರು ಅದೇ ತಮ್ಮ ಪಾಲಿನ ಕಟ್ಟಕಡೆಯ ಮಂತ್ರಿಮಂಡಲದ ಸಭೆ ಎಂದು ಹೇಳಿ ಸಂಗಾತಿಗಳಿಗೆ ವಿದಾಯ ಹೇಳಿದರು.
ಯಡಿಯೂರಪ್ಪ ಬೆಂಬಲಿಗ ಶಾಸಕರು ಅವರ ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡಿ ಬಿಜೆಪಿಯನ್ನು ತೊರೆಯುವ ಸಂಭವವೂ ಇದೆ.
ಎಷ್ಟು ಜನ ಶಾಸಕರು ಈ ರಾಜಿನಾಮೆಯ ಅಂದೋಲನದಲ್ಲಿ ಪಾಲುಗೊಳ್ಳುತ್ತಾರೆ ಎನ್ನುವುದು ಮುಖ್ಯ. ಬಹಿರಂಗವಾಗಿ ರಾಜಿನಾಮೆ ಪತ್ರಗಳನ್ನು ನೀಡಿದರೆ ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಬಹುಮತವನ್ನು ಕಳೆದುಕೊಳ್ಳುವ ಸ್ಥಿತಿಯನ್ನು ಮುಟ್ಟುವ ಸಂಭವವೂ ಇದೆ.
ಆ ಹಂತದಲ್ಲೇ ರಾಜಕೀಯ ಪಕ್ಷಗಳ, ನಾಯಕರ ನಿಜವಾದ ಬಣ್ಣ ಪ್ರಕಟವಾಗುವುದು. ಈಗಾಗಲೇ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅನಿಶ್ಚಿತತೆಯ ಪರಿಸ್ಥಿತಿ ಮೂಡಿ ಹಲವು ತಿಂಗಳುಗಳೇ ಕಳೆದಿವೆ. ಆ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಾವಸ್ಥೆಯನ್ನು ತಲುಪುವಂತೆ ಮಾಡಿದರೆ ಆಡಳಿತ ವ್ಯವಸ್ಥೆ ಕುಸಿಯದಂತೆ ಸಂವಿಧಾನದ ಕ್ರಮ ಅಗತ್ಯವಾಗಬಹುದು. ಖಂಡಿತವಾಗಲೂ ಇದು ಒಳ್ಳೆಯ ಬೆಳವಣಿಗೆ ಅಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

