ನೀವು ಕೆಜೆಪಿ ಸೇರ್ತೀರಾ? ಈ ಕಡೆಗೆ ಅದೇ ಸುದ್ದಿ ಭಟ್ರೇ?!
ಅನಂತನಾರಾಯಣ ಎಂ.ಎನ್. ಮೈಸೂರು
ನೀವು ಕೆಜೆಪಿ ಸೇರ್ತೀರಾ? ಈ ಕಡೆಗೆ ಅದೇ ಸುದ್ದಿ ಭಟ್ರೇ?!
ಮೊನ್ನೆ ಯಡಿಯೂರಪ್ಪನವರಿಗೂ ಇದೇ ಪ್ರಶ್ನೆ ಕೇಳಿದರಂತೆ!
ಚಂದ್ರು ಅರಕಲಗೂಡು
ಜೀವನದಲ್ಲಿ ಜುಗುಪ್ಸೆ ಬಂದಿದೆ. ವಿಷ ಕುಡಿಯೋಣ ಅಂತಿದೀನಿ. ನಿಮ್ಮ ಸಲಹೆ?
ವಿಷದಲ್ಲಿ ಕಲಬೆರಕೆ ಇಲ್ಲವೆಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಕ್ಷೇಮ!
ಕುಡಿತಿನಿ ಮಹೇಶ, ಬಳ್ಳಾರಿ
ಆಂಡೆಪಿರ್ಕಿ ಬಗ್ಗೆ ಬರೆಯುತ್ತಿದ್ದಿರಿ. ಇತ್ತೀಚೆಗೆ ಆ ಬಗ್ಗೆ ಪ್ರಸ್ತಾಪ ಮಾಡ್ತಿಲ್ಲ ಏಕೆ?
ಸುಮ್ಮನೆ ಇದ್ದೇನೆ ಅಂತ ಅಂದ್ರೆ ಏನೋ ಅಪಾಯ ಕಾದಿದೆ ಎಂದರ್ಥ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ನಾವು ಕೇಳುವ ಪ್ರಶ್ನೆಗಳಿಗೆ ನಿಮಗೆ ಉತ್ತರ ಹುಟ್ಟುವ ಸಮಯ ತಿಳಿಸ್ತೀರಾ?
ಅಲ್ಲೇ ಡ್ರಾ, ಅಲ್ಲೇ ಬಾಣ!
ಎಂ. ಬಿ. ಕೃಷ್ಣಮೂರ್ತಿ, 94491 30531
ವ್ಯಾಪಾರ ಮಾಡಲು ಬಂಡವಾಳ ಬೇಕು, ಪ್ರೀತಿ ಮಾಡಲು?
ಕಲಿಯುಗದಲ್ಲಿ ಅದೂ ಬಂಡವಾಳವಿದ್ದರಷ್ಟೇ ಸಾಧ್ಯ ಮಾರಾಯಾ!
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

