ನನ್ನ ಮನಸು ಬೆಣ್ಣೆಗಿಂತಾ ಮೃದು ಅಂದವಳು ಮಾತು...
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಪ್ರತೀ ವಾರವೂ ಭಾನುವಾರವಾಗಿದ್ರೆ ಹೇಗಿರುತ್ತಿತ್ತು?
ಭಾನುವಾರವೂ ಕೆಲಸಕ್ಕೆ ಹೋಗಬೇಕಾಗುತ್ತಿತ್ತು!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಕಾಂಗ್ರೆಸ್ ಜನತಾದಳ ಹಾಗೂ ಬಿಜೆಪಿ ಪಕ್ಷಗಳ ಆಡಳಿತ ನೋಡಿಯಾಯಿತು. ಮುಂದೆ?
ಕೆಜೆಪಿಯವರು ಹೋಸ ಕೋಟ್ ಹೊಲಿಸಿಕೊಂಡು ಸಿದ್ಧರಾಗಿದ್ದಾರೆ!
ಆರ್. ಮಧುಸೂದನ್, 9945737427
ನನ್ನ ಮನಸು ಬೆಣ್ಣೆಗಿಂತಾ ಮೃದು ಅಂದವಳು ಮಾತು ಮಾತಿಗೂ ಕೋಪ ಮಾಡಿಕೊಳ್ತಾಳಲ್ಲ?
ಸರಿಯಾಗಿ ಕಾಪಿಡದಿದ್ದರೆ ಬೆಣ್ಣೆಯೂ ವಾಸನೆ ಬರುತ್ತದೆ!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
'ಕೈ' ಪಕ್ಷದಲ್ಲಿ ಕಾಲೆಳೆಯುವ ಮಂದಿ ಜಾಸ್ತಿಯಿದ್ದಾರಲ್ಲ?
'ಕೈ' ಇರುವುದೇ ಅದಕ್ಕೆ ಎಂದು ಭಾವಿಸಿದವರೇ ಹೆಚ್ಚಿದ್ದಾರೆ ಅಂತಾಯ್ತು!
ಬಿ.ಎಂ. ಪರಶಿವಮೂರ್ತಿ, ವಿಜಯನಗರ, ಬೆಂಗಳೂರು
ವಯಸ್ಸಿಗೆ ಬಂದ ಹುಡುಗನಿಗೆ ಚಿಗುರು ಮೀಸೆ ಬರುತ್ತೆ. ಹುಡುಗಿಗೆ?
ಹುಡುಗನ ಚಿಗುರು ಮೀಸೆ ಮೇಲೆ ಆಸೆ ಬರುತ್ತ್ತೆ!
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

