ಅವಿವಾಹಿತರೆಲ್ಲ ಬ್ರಹ್ಮಚಾರಿಗಳಾ?
ಮಗ್ಗಳ್ಳಿ ಗುರು, ಬನವಾಸಿ 9480931442
ಮೊದಲ ರಾತ್ರಿ ಹೆಂಡತಿ ಗಂಡನಿಗೆ ಹಾಲೇ ಏಕೆ ಕೊಡಬೇಕು?
ಆಲ್ಕೋಹಾಲ್ ಕೊಟ್ಟರೆ ಎರಡು ನಶೆಗಳನ್ನು ಒಟ್ಟಿಗೇ ಸಂಭಾಳಿಸಲಾಗದು ಎಂಬ ಆತಂಕ!
ಹರಳಹಳ್ಳಿ ಪುಟ್ಟರಾಜು, 9632838088
ಅವಿವಾಹಿತರೆಲ್ಲ ಬ್ರಹ್ಮಚಾರಿಗಳಾ?
ಸಿಂಗಲ್ ಟೀ ಕುಡಿಯೋಕೆ ಹಸು ಕಟ್ಟಿಕೊಳ್ಳೋದೇಕೆ ಎಂದು ಯೋಚಿಸುವ ಒಂಥರಾ ಜಾಣರು!
ವಿ. ಹೇಮಂತಕುಮಾರ್, 9035992900
ಹುಡುಗರ ಕಷ್ಟ ಹುಡುಗಿಯರಿಗಿಂತ ಆಂಟಿಯರೇ ಹೆಚ್ಚು ತಿಳಿದುಕೊಂಡಿರುತ್ತಾರಲ್ಲ?
ಅನುಭವ ಇರುವಲ್ಲಿ ಅಮೃತತ್ವ ಇದೆ!
ಆರೀಫ್, ದಾವಣಗೆರೆ 9964280609
ತುಂಡ್ ಹೈಕ್ಳ ಸಹವಾಸ ಮೂರು ಹೊತ್ತು ಉಪವಾಸ. ತುಂಡ್ ಬಟ್ಟೆ ತೊಟ್ಟ ಹುಡುಗಿಯರ ಸಹವಾಸ?
ಹಸಿವು ತೀರಿಸದ ಮೃಷ್ಟಾನ್ನ!
ಬಸವನಗೌಡ ಹೆಬ್ಬಳಗೆರೆ
ಕೆಲ ಮನೆಗಳಲ್ಲಿ ಗಂಡ 'ವಿರೋಧ ಪಕ್ಷದ ನಾಯಕ', ಹೆಂಡತಿ 'ಆಡಳಿತ ಪಕ್ಷದ ನಾಯಕಿ' ಥರ ವರ್ತಿಸುತ್ತಾರಲ್ಲ?
ಮಕ್ಕಳು ಆಗಲೇ ಸಭಾತ್ಯಾಗ ಮಾಡಿರೋದು ನಿಮ್ಮ ಕಣ್ಣಿಗೆ ಬಿದ್ದಿಲ್ವೇ?
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

