ತೋಟಕ್ಕೆ ಬೇಲಿ, ಹೆಣ್ಣಿಗೆ ತಾಳಿ.. ಗಂಡಿಗೆ?
ಮಾಗಡಿ ಶ್ರೀನಿವಾಸ್, ರಾಮನಗರ, 9902797767
'ಖುಷ್ಬು' ದೇವಾಲಯದಂತೆ ಕರ್ನಾಟಕದಲ್ಲಿ ನಟಿಯೊಬ್ಬರ ದೇವಾಲಯವಿಲ್ಲವಲ್ಲ?
ಸುಮ್ನಿರು ಅಣ್ಣಮ್ಮ ಪಕ್ಕದಲ್ಲಿ ನನಗೊಂದು ದೇಗುಲವಿರಲಿ ಎಂದು ತಾರಮ್ಮ, ಜಯಮ್ಮ ವರಾತ ಹಿಡಿಯಬಹುದು.
ಬಸವನ ಗೌಡ ಹೆಬ್ಬಳಗೆರೆ, ಚನ್ನಗಿರಿ
ಕುಡಿತದ ತುಡಿತವಿರುವವರಿಗೆ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಕಡಿತದ ಬಗ್ಗೆ ಅರಿವಿರುವುದಿಲ್ಲವೇ?
ಕುಡಿದ ಮೇಲೆ ಬಾಡಿ ಬ್ಯಾಲೆನ್ಸ್ ಇದ್ದರೆ ಸಾಕು.
ನೆರಲಗುಡ್ಡ ಶಿವಕುಮಾರ, ಶಿರಾ, 9480343742
ತೋಟಕ್ಕೆ ಬೇಲಿ, ಹೆಣ್ಣಿಗೆ ತಾಳಿ.. ಗಂಡಿಗೆ?
ತಾಳಿಕೊಳ್ಳಬೇಕು ಇವೆರಡನ್ನೂ ಮೀರಿ ಬರುವ ದಾಳಿ!
ಓಂ. ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಪ್ರೀತಿ-ಪ್ರೇಮ ವಿಚಾರದಲ್ಲೂ ಲಂಚ ಅನಿವಾರ್ಯವೇ?
ಲಂಚದ ವಿಷ್ಯ ಗೊತ್ತಿಲ್ಲ. ಮಂಚವಂತೂ ಅನಿವಾರ್ಯ!
ಜೆ. ಪಿ. ನಾಗರಾಜ, 9901193811
ಸ್ತ್ರೀ, ಪುರುಷನ ಬಾಳಲ್ಲಿ ದೇವತೆಯಾಗುವುದು ಯಾವ ಸಂದರ್ಭದಲ್ಲಿ?
ಕೆಲವರ ಅನುಭವದ ಪ್ರಕಾರ ನಿಜಕ್ಕೂ ಆಕೆ ದೇವರ ಬಳಿ ಹೋದ ಸಂದರ್ಭದಲ್ಲಿ!
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

