ಸಂಪಾದಕೀಯ

ಅಲೆದಾಟ

Published On :

ಅಲೆದಾಟ
    ಸಮುದ್ರದ ಅಲೆಗಳೊಂದಿಗೆ ಆಡುವ ಆಟ
    ಉದ್ಯೋಗಕ್ಕಾಗಿ ಅಲೆಯುವ ನಿರುದ್ಯೋಗಿಗಳ ಕರ್ಮ
    ಕೆಲಸ ಆಗಬೇಕೆಂದರೆ ಕೆಲಸ ಬಿಟ್ಟು ಅಲೆಯುವುದು ಅನಿವಾರ್ಯ
    ಗರ ಗರ
    ತಿರು ತಿರುಗಿ ತಿರುಗಾಡ
    ಹೊಡೆದಾಟ ಬಡಿದಾಟ ಮಾಡುವವರು ಮಾಡಲೇಬೇಕು ಜೈಲಿಗೆ ಅಲೆದಾಟ
    ಆಟದ ಮೇಳದವರ ನಿತ್ಯ ಕರ್ಮ
    ಹೊಟ್ಟೆ ತುಂಬ ಊಟ, ಕಣ್ಣು ತುಂಬ ನಿದ್ರೆ ಇರುವವನ ಹವ್ಯಾಸೀ ಕೆಲಸ
ಶಾಂತಿ
    ಶಾಂತಿಗಾಗಿಯೇ ಜಗತ್ತಿನಲ್ಲಿ ಯುದ್ಧಗಳು ಸಂಭವಿಸುತ್ತಿರುವುದು
    ಶಾಂತಿ ಬೇಕಿದ್ದರೆ ಶಾಂತಿಯನ್ನು ಮದುವೆಯಾಗದಿದ್ದರಾಯಿತು
    ಶಾಂತಿಯನ್ನು ಪ್ರೀತಿಸುವವರೂ ಶಾಂತಿ ಪ್ರಿಯರೇ
    ಶಾಂತಿ ಉಳ್ಳವನ ಮುಖದ ತುಂಬಾ ಕಾಂತಿ
    ಗ್ರಹದೋಷ ನಿವಾರಣೆಗೆ ಮಾಡುವ ಹೋಮ
    ಇದು ಯಾವುದರಲ್ಲಿದೆ ಎಂದು ತಿಳಿದವನಿಗೆ ಇದು ಉಂಟು
    ತಿಳುವಳಿಕೆಯಿಂದ ಮನಸ್ಸು ತಿಳಿಗೊಂಡಾಗಿನ ಸ್ಥಿತಿ
    ಬೇಕು ಬೇಕೆಂಬ ಬಯಕೆ ಬಿಟ್ಟಾಗ ಬೇಡವೆಂದರೂ ಸಿದ್ಧಿಸುವಂಥದ್ದು

-ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.