ಯಾರು ವಾಸಿ ಹೇಳಿ ಬಾ. ಭಟ್ಟರೇ? ಭರಪೂರ ಭರವಸೆಯ ಬಜೆಟ್ ಹರಿಸಿದ ಶೆಟ್ರೋ ಇಲ್ಲ ಬೈಟು ಕಾಫಿ ಕುಡಿಸುವ ಭಟ್ರೋ?
ಎಸ್. ರಾಘಣ್ಣ, ಕೃಷ್ಣಮೂರ್ತಿಪುರಂ
ಯಾರು ವಾಸಿ ಹೇಳಿ ಬಾ. ಭಟ್ಟರೇ? ಭರಪೂರ ಭರವಸೆಯ ಬಜೆಟ್ ಹರಿಸಿದ ಶೆಟ್ರೋ ಇಲ್ಲ ಬೈಟು ಕಾಫಿ ಕುಡಿಸುವ ಭಟ್ರೋ?
ಬೈ ಟು ಕಾಫಿಯ ಗಮ್ಮತ್ತು ಬಜೆಟ್‌ಗೆ ಎಲ್ಲಿಂದ ಬರಬೇಕು?
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಮನ್ಮಥನ ಹೂವಿನ ಬಾಣಕ್ಕೂ ನಿಮ್ಮ ಬಾಣಕ್ಕೂ ಇರುವ ವ್ಯತ್ಯಾಸವೇನು?
ನನ್ನ ಬಾಣದಿಂದ ಸಂತ್ರಸ್ತರಾದವರು ಎಷ್ಟು ದೊಡ್ಡದಾಗಿ ಕಣ್ಣು ಬಿಟ್ಟರೂ ನಾನು ಭಸ್ಮವಾಗಲಾರೆ!
ಕೆ.ವಿ. ಶಿವಕುಮಾರ್, ಮೈಸೂರು
ಶತಮೂರ್ಖ ಅಂತಾರಲ್ಲ ಏಕೆ?
ತಮ್ಮ ಪದಭಂಡಾರದ ಶಾಣ್ಯಾತನ ತೋರಿಸಿಕೊಳ್ಳೋಕೆ.
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ 9632838088
ಇತ್ತೀಚಿನ ಚಿತ್ರನಟಿಯರು ತಾವು ಐಟಂಸಾಂಗಿಗೂ ಸೈ ಎನ್ನುವುದೇಕೆ?
ಎಲ್ಲವೂ ಕ್ಷಣಿಕ ಎಂಬ ಮಾತನ್ನು ಬೇರೆ ಅರ್ಥದಲ್ಲಿ ತೆಗೆದುಕೊಂಡಿರುವ ಪರಿಣಾಮ.
ಲಕ್ಕೂರು ಎಂ. ನಾಗರಾಜ, 9900538954
ಬಡವರ ಬಾದಾಮಿ ಕಡಲೆಬೀಜ. ಶ್ರೀಮಂತರ ಬಾದಾಮಿ ಯಾವುದು?
ಅಯ್ಯೋ, ಅವರಿಗೆ ಏನ್ ತಿಂದ್ರೂ ಹೊಟ್ಟೆ ಕೆಡುತ್ತೆ!
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

