ನಿದ್ದೆ ಮಾತು
ಕನಸಿನಲ್ಲಿನ ಕನವರಿಕೆ
ಕೆಲವು ಗಂಡಸರಿಗೆ ಹೆಂಡತಿಯೆದುರು ಮಾತನಾಡಲು ಇರುವ ಏಕೈಕ ಅವಕಾಶ
ಮನಸಿನಲ್ಲಿ ತಿಂದ ಮಂಡಿಗೆಗಳನ್ನೆಲ್ಲ ಕನಸಿನಲ್ಲಿ ಕಕ್ಕುವ ಮಾಧ್ಯಮ
ಮನಸಿನ ಕಿಲುಬುಗಳನ್ನೆಲ್ಲ ಹಲುಬುವ ಮೂಲಕ ತೊಳೆದುಕೊಳ್ಳುವಿಕೆ
ಸದನದಲ್ಲಿನ ಕೆಲವರ ಮಾತುಗಳನ್ನು ಕೇಳಿದರೆ ಹೀಗೆಯೇ ಅನಿಸುವುದು
ನಿದ್ರಾಂಗನೆಯೊಡನೆಯ ಸಲ್ಲಾಪ
ಸ್ವಪ್ನ ಭಾಷಣ
ವಿದ್ಯಾರ್ಥಿಗಳೆಲ್ಲ ನಿದ್ರೆಯಲ್ಲಿರುವಾಗ ನಡೆಯುವ ಪಾಠ
ಅಭಿವ್ಯಕ್ತಿ ಸ್ವಾತಂತ್ರ್ಯದ ಅತಿರೇಕ ಬಳಕೆ
ವಿಶ್ರಾಂತಿ ಮತ್ತು ಕೆಲಸ ಏಕಕಾಲಕ್ಕೆ ನಡೆಯುವುದಕ್ಕೊಂದು ಉದಾಹರಣೆ
ವಾಚಾಳಿಯ ಅವಿಶ್ರಾಂತ ವಾಚಿಕ ಶ್ರಮ
ಅಕಸ್ಮಾತ್ ಸತ್ಯ ಹೇಳಿಬಿಡುವ ಅಪಾಯಕಾರಿ ಸಂದರ್ಭ
ಶ್ರೋತೃ ವರ್ಗದ ಅಪೇಕ್ಷೆಯಿಲ್ಲದ ಮಾತು
ಪ್ರಜ್ಞಾಹೀನ ನುಡಿಗಳು
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

