ಗಂಡಿಗೆ ಗುಂಡಿಗೆ ಗಟ್ಟಿಯಿರಬೇಕು...ಹೆಣ್ಣಿಗೆ?
ಆರ್. ಮಧುಸೂದನ್ 99457-37427
ಪ್ರಣತಿಯ ಪೂರ್ಣ ಮುಖವನ್ನು ನೋಡುವ ಆಸೆ. ಅವಳ ತಲೆಕೂದಲನ್ನು ಸ್ವಲ್ಪ ಸರಿ ಮಾಡ್ತೀರಾ ಪ್ಲೀಸ್?
ಅದಕ್ಕೆ ಅವಳ ಅಣತಿ ಇಲ್ಲ!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್ ಭದ್ರಾವತಿ, 9901 257131
ಹುಡ್ಗೀರು ಮೊದಲು ಪ್ರಪೋಸ್ ಮಾಡ್ತಾರೊ? ಅಥವಾ ಹುಡುಗರು ಮೊದಲು ಪ್ರಪೋಸ್ ಮಾಡ್ತಾರೋ ಭಟ್ರೆ?
ಹುಡುಗಿಯರು ಮೊದಲು ಪೋಸ್ ಕೊಡ್ತಾರೆ,
ಆಮೇಲೆ ಹುಡುಗರು ಪ್ರಪೋಸ್ ಮಾಡ್ತಾರೆ!
ರಂಜಿತ ರಣಸಿಂಗ್, ಅಥಣಿ 81233679919
ಗಂಡಿಗೆ ಗುಂಡಿಗೆ ಗಟ್ಟಿಯಿರಬೇಕು...ಹೆಣ್ಣಿಗೆ?
ಗುಂಡಿ ಗಟ್ಟಿ ಇರಬೇಕು.
ರವಿಕುಮಾರ್. ಜಿ.ಬಿ. 944966 9897
ಪ್ರೀತಿಸಿ ಮದುವೆಯಾದ ತಂದೆ ತಾಯಿಗಳು ತಮ್ಮ ಮಕ್ಕಳ ಪ್ರೀತಿಗೆ ವಿರೋಧಿಸುತ್ತಾರೆ ಏಕೆ?
ತಾವು ಬಿದ್ದ ಹೊಂಡಕ್ಕೆ ಮಕ್ಕಳು ಬೀಳದಿರಲಿ ಅಂತ!
ಕೆ.ಎನ್. ನಾರಾಯಣರೆಡ್ಡಿ, ಕೆ.ಜಿ.ಎಫ್.
ಬಡವನ ಕೋಪ ದವಡೆಗೆ ಮೂಲ, ಹೆಂಡತಿಯ ಕೋಪ...?
ಪಾಕೆಟ್‌ಗೆ ಮೂಲ
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

