ತಾರತಮ್ಯ ಮಾಡಬಾರದು ಎಂದು ಬೋಧಿಸುವ ಅಧ್ಯಾಪಕರೊಬ್ಬರು ಇಂದು ಜಾತಿ...
ಮನು ವಿ. ದಾವಣಗೆರೆ, 9739259427
ತಾರತಮ್ಯ ಮಾಡಬಾರದು ಎಂದು ಬೋಧಿಸುವ ಅಧ್ಯಾಪಕರೊಬ್ಬರು ಇಂದು ಜಾತಿ ಮತ್ತು ವರ್ಣದಲ್ಲಿ ತಾರತಮ್ಯ ತೋರುತ್ತಾರಲ್ಲ?
ಜಾತಿ ತಾರತಮ್ಯ ಮಾಡುವವರೇ ತಾವು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಿರುತ್ತಾರೆ.
ಜಗದೀಶ ಸಂಗಣ್ಣವರ, ಬೆಳಗಾವಿ 8722444410
ಭಟ್ರೇ ನೀವು ಬೆಂಗಳೂರಿನಲ್ಲಿ ಸಮಯ ಹೇಗೆ ಕಳೆಯುವಿರಿ?
ಇಲ್ಲಿ ಸಮಯ ತನ್ನಿಂದ ತಾನೇ ಕಳೆಯುತ್ತದೆ. ಇಲ್ಲಿ ಎಲ್ಲದಕ್ಕೂ ಸಮಯ ಕೂಡಿಸಬೇಕಷ್ಟೆ.
ಬೋ.ಪಾ. ವೆಂಕಟೇಶ್, ಬೆಂಗಳೂರು, 9964862720
ಶಿಕ್ಷಕರನ್ನು ತೇಜೋವಧೆ ಮಾಡುವ ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆ?
ನೀವೂ ಮುಂದೆ ಶಿಕ್ಷಕರಾದೀರಿ ಎಚ್ಚರ.
ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ
ಬಾಣಭಟ್ರೇ ಪತ್ನಿಯನ್ನು 'ಧರ್ಮಪತ್ನಿ' ಎಂದೇಕೆ ಕರೆಯುತ್ತಾರೆ?
ನಿಮ್ಮ ಕಡೆಯ ಭಾಷೆಯಲ್ಲೇ ಹೇಳುವುದಾದರೆ 'ಧರ್ಮ'ಕ್ಕೆ ಸಿಕ್ಕಿದವರು ಅಂತ!
ಜಾನು ದಾವಣಗೆರೆ
ನಿಮ್ಮ ಮನೆ ದೇವರಲ್ಲಿ ನೀವು ಕೇಳಿಕೊಳ್ಳುವ ವರ ಯಾವುದು ಭಟ್ರೇ?
ನಾನು ಸದಾ ವಧುವನ್ನೇ ಕೇಳುವುದು!
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

