ಚಪಲ
ಹಲ್ಲು ಬಿದ್ದರೂ ಮೆಲ್ಲುವ ಆಸೆ
ಇಳಿ ವಯಸ್ಸಿನಲ್ಲೂ ಇಳಿಯದ ಬಯಕೆ
ತೆವಳುವ ಸ್ಥಿತಿಯಲ್ಲೂ ತೊಲಗದ ತೆವಲು
ಅದೂ ಬೇಕು ಇದೂ ಬೇಕು ಎಂಬ ಆಕಾಂಕ್ಷೆ
ಪಾಯಸ ಕುಡಿದ ಮೇಲೂ ಕೈ ನೆಕ್ಕುವಿಕೆ
ಬಲವಾದ ಹಂಬಲ
ಇದೊಂಥರಾ ಚಂಚಲ ಚಲಪತಿತ್ವ
ತಿನ್ನುವ ಚಾಪಲ್ಯವುಳ್ಳವರನ್ನು ಕಟ್ಟಿಕೊಂಡರೆ ಅಡಿಗೆ ಮಾಡಿ ಹಾಕುವುದೇ ಮುಗಿಯುವುದಿಲ್ಲ
ಚಾಪೆ ಹಾಸಿ ಮಲಗುವುದೇ ತಡ.....
ಚಪಲ ಚನ್ನಿಗರಾಯನಿಗೆ ಮನೆಯಲ್ಲೊಂದು ಹೆಂಡತಿ, ಬೀದಿಯಲ್ಲೊಂದು ಗಿಂಡತಿ
ಹಲ್ಲು ಕಿಸಿದು ಜೊಲ್ಲು ಸುರಿಸುವಿಕೆ
ಮದನನ ಚಾಪದ ತುದಿಯಿಂದ ಹರಡುವ ಸಾಂಕ್ರಾಮಿಕ ಜಾಡ್ಯ
ತಡೆಯೇ ಇಲ್ಲದ ತುಡಿತ
ಮೊದ ಮೊದಲು ಚಪಲ. ಆಮೇಲೆ ಚಟ
ಚಪಲ ತೀರಿಸಿಕೊಳ್ಳಲು ಸಫಲರಾದವರಿಲ್ಲ
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

