ಕೃಷ್ಣ
ಕೃಷ್ಣ
ಪಿಳ್ಳಂಗೋವಿಯ ಹಿಡಿದು ಗೋವನು ಪಾಲಿಸಿದ ಪಿಳ್ಳೆ
ತಂತ್ರ, ಕುತಂತ್ರ ಪ್ರತಿತಂತ್ರಗಳೆಲ್ಲದರ ಮಂತ್ರ ಬಲ್ಲವ
ಪುಂಡರ ಕಟ್ಟಿಹಾಕಿದ ಪುಂಡಲೀಕ
ಅಧರ್ಮ ತಾಂಡವವಾಡುವಾಗ ಬರುವನಂತೆ. ಅವನು ಬರುವಂತೆ ಮಾಡುವಲ್ಲಿ ನಮ್ಮೆಲ್ಲರ ಪಾತ್ರವೂ ಇರುತ್ತದೆ
ಗೊಲ್ಲರ ಗೊಲ್ಲ. ಎಲ್ಲವನೂ ಬಲ್ಲ
ಹೇಡಿತನ ಆವರಿಸುವ ಹೊತ್ತಿಗೆ ಅರ್ಜುನನನ್ನು ಗೀತೆಯ ಹಾಡಿ ಬಡಿದೆಚ್ಚರಿಸಿದವ
ಇವನ ಪ್ರಕಾರ ನಾವು ಕರ್ಮ ಮಾತ್ರ ಮಾಡಬೇಕು. ಫಲವನ್ನು ಇವನಿಗೇ ಬಿಡಬೇಕಂತೆ.. ಆಗುವ ಕೆಲಸವಾ ಇದು?!
ಕೌರವರೆಂಬ ಪಾಕಿಗಳು ಆಕ್ರಮಣಕ್ಕೆ ನಿಂತಾಗ ಮೌನಮೋಹನನಾಗಿದ್ದವನನ್ನು ಪ್ರಚೋದಿಸಿ (ಮಹಾ)ಭಾರತವ ಗೆಲ್ಲಿಸಿದವ
ಕೃಷ್ಣ ನಮ್ಮೆಲ್ಲರ ಮನಸ್ಸನ್ನು ಕರ್ಷಿಸುವವನೂ ಹೌದು ಆಕರ್ಷಿಸುವವನೂ ಹೌದು.ಅದಕ್ಕೇ ಆತ ಸಂಕರ್ಷಣ
ಮಗಳು ಕೃಷ್ಣನಂಥ ಗಂಡ ಬೇಕು ಎಂದು ಬಯಸಿದರೂ ಯಾವ ಅಪ್ಪನೂ ಕೃಷ್ಣನಂಥ ಅಳಿಯನನ್ನು ಒಪ್ಪುವುದಿಲ್ಲ.ಕಾರಣ ಕೃಷ್ಣ ಮಾವನನ್ನೇ ಕೊಂದವ
ಗೊಲ್ಲರ ಹಟ್ಟಿಯ ಕಿಂದರಿಜೋಗಿ
ದಾಸಾನುದಾಸನಾಗದಿದ್ದರೆ ಇವನ ಉದಾಸೀನಕ್ಕೊಳಗಾಗಬೇಕಾಗುತ್ತದೆ
ಬಾಯಿಯಲ್ಲೇ ಬೃಹತ್ ಬ್ರಹ್ಮಾಂಡ ತೋರಿಸಿದವ
ಸಂಸಾರ ಸಾಗರವ ದಾಟುವ ಹರಿಗೋಲು ಈತ
ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

