ಕಣ್ಣು
ಕಣ್ಣು
ಕಣ್ಣು ಒಂಥರಾ ಖಂಡಾಂತರ ಕ್ಷಿಪಣಿ; ಖಂಡದಿಂದ ಖಂಡಕ್ಕೆ ದಾಳಿ ಮಾಡುತ್ತದೆ
ರೂಪ ರೂಪಗಳನು ದಾಟಿ ರೂಪವಂತೆಯರನು ಮೀಟಿ ನಗುವ ಈಟಿ
ನಿಮ್ಮನ್ನು ಮುನ್ನಡೆಸುವ ನೇತಾ ಈ ನೇತ್ರ
ಕಣ್ಣು ತಪ್ಪು ಮಾಡಿದರೆ ಬೆನ್ನಿನ ಮೂಳೆ ಮುರಿಯುತ್ತದೆ
ನಿಜವಾದ ಸಮಾನತೆಯ ಹರಿಕಾರ ಈ ಕಣ್ಣು. ಎಲ್ಲವನ್ನೂ ಸಮಾನವಾಗಿ ನೋಡುತ್ತದೆ
ಹೆಣ್ಣಿನ ಕಣ್ಣು ಮೀನು; ಗಂಡಿನ ಕಣ್ಣು ಗಾಳ
ಸತ್ತ ಮೇಲೂ ನಮ್ಮ ಕಣ್ಣು ಸುಂದರ ಹುಡುಗಿಯರನ್ನು ನೋಡಬೇಕೆಂದರೆ ನೇತ್ರ ದಾನ ಮಾಡಬಹುದು
ಗಂಡನನ್ನು ಬೆದರಿಸಲು ಹೆಂಡತಿಗಿರುವ ಪರಮಾಯುಧ
ಮದುವೆಗೆ ಮುಂಚೆ ಕಮಲಾಕ್ಷಿ; ನಂತರ ಕಂಡರೆ ಬರೀ ಆಕ್ಷೀಡಡ..
ಕಣ್ಣಿದ್ದೂ ಕುರುಡರು ಕೆಲವರು. ಯಾವ ಕನ್ನಡಕವೂ ಅವರ ನೋಟವನ್ನು ನೆಟ್ಟಗಾಗಿಸದು
ಕಣ್ಣಿನ ದೀರ್ಘ ಆರೋಗ್ಯಕ್ಕಾಗಿ ಹಣ್ಣನ್ನು ಬಳಸಿ, ಹೆಣ್ಣನ್ನು ದೂರವಿಡಿ
ಕಂಡಿದ್ದೆಲ್ಲ ಸತ್ಯವಲ್ಲ. ಕಾಣದ್ದು ಸುಳ್ಳೂ ಅಲ್ಲ.
ಕಣ್ಣು ಸಾಕ್ಷಿ. ಬುದ್ಧಿ ನ್ಯಾಯಾಧೀಶ.
ಕಮಲದ ಕಣ್ಣುಗಳಿದ್ದಲ್ಲಿ ಹದ್ದಿನ ಕಣ್ಣುಗಳೂ ಇರುತ್ತವೆ
ಮೊದಲು ಗೋಡೆಗೂ ಕಿವಿಯಿರುತ್ತಿತ್ತು. ಈಗ ಗೋಡೆಗೆಲ್ಲಾ ಕಣ್ಣು
ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

