ಕಾಯಕ
ಕಾಯಿ ಕೊಯ್ಯುವ ಕೆಲಸ
ಕಾಯ ಇರುವ ತನಕ ಮಾಡಬೇಕಾದ ಕರ್ತವ್ಯ
ನಿತ್ಯ ಕರ್ಮ
ಕೆಲವರು ಇದನ್ನೇ ಕೈಲಾಸ ಎಂದುಕೊಳ್ಳುತಾರೆ. ಸೋಮಾರಿಗಳು ಇದನ್ನೇ ನರಕ ಎಂದು ಭಾವಿಸುತ್ತಾರೆ
ಕಾಯಿಕವಾದ ಶ್ರಮವೇ ಕಾಯಕ
ಕಾರ್ಯ ಕಾರಣಗಳ ಹಂಗಿಲ್ಲದೇ ಮಾಡಬೇಕಾದದ್ದು
ಕಿಸೆ ಮತ್ತು ಹೊಟ್ಟೆ ತುಂಬಿರಬೇಕಾದರೆ ಇದು ಅನಿವಾರ್ಯ
ಸೋಮಾರಿಯ ಮಾರಿ
ಬ್ಯೂಟಿಗಿಂಥ ಸುಂದರವಾದ ಅಲಂಕಾರ ಈ ಡ್ಯೂಟಿ
ಬಾಯಿಗೆ ಮೊಸರು ಬೀಳಿಸುವ ಕೈಯ ಕೆಸರು
ಲಿಂಗ ಭೇದವಿಲ್ಲದ್ದು
ವರ್ಕ್ ಔಟ್ ಆಗದಿದ್ದರೂ ಮಾಡಲೇಬೇಕಾದ ವರ್ಕ್
ಎಲ್ಲರ ಉದ್ಯೋಗದಾತ
ಕಾಯ ಹಣ್ಣಾದರೂ ಬಿಡಲಾಗದ ಕರ್ಮ
ಕಾಯಕವೇ ದೇವರು. ಈ ವಿಷಯದಲ್ಲೂ ದೇವರನ್ನು ನಂಬದ ನಾಸ್ತಿಕರಿದ್ದಾರೆ. ಅವರೇ ಸೋಮಾರಿಗಳು
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

