ಕಾಮ
ವಿಶ್ವಾಮಿತ್ರನ ತಪೋಭಂಗಕ್ಕೆ ಕಾರಣವಾದದ್ದು
ಕಾಮನಿಲ್ಲದಿದ್ದರೆ ಕಾಳಿದಾಸನ ಯಕ್ಷನಿರುತ್ತಿರಲಿಲ್ಲ, ಓದಲು ನಾವೂ ಇರುತ್ತಿರಲಿಲ್ಲ
ಪ್ರಜಾಸಂಖ್ಯೆ ಹೆಚ್ಚಳಕ್ಕೆ ಕಾರಣವಾದದ್ದು ಮತ್ತು ಮಜಾ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿರುವುದು
ಪೋಲಿ ಹುಡುಗರ ಶಕ್ತಿ ಪೋಲಾಗುವ ರಂಧ್ರ
ತಡೆಯೊಡ್ಡಿದಂತೆ ತೊಡೆ ತಟ್ಟಿ ಬರುವ ಅಂತಃಶತ್ರು
ನಿಷ್ಕಾಮ ಭಾವದಿಂದ ಮಾಡಿದ ಕರ್ಮ ಸಕಾಮ ಕರ್ಮಕ್ಕಿಂತ ಹೆಚ್ಚು ಕಾಮನೆಗಳನ್ನು ಪೂರೈಸಬಲ್ಲದು
ಮನಸ್ಸಿಗೆ ಬಡಿದಿರುವ ಕೆಟ್ಟ ವಾಸನೆ
ಹರನಿಂದ ಹರಹರಾ ಆದವನೀತ
ಮನದೊಳಗೆ ಒಮ್ಮೆ ಕಾಮನ ಪ್ರವೇಶವಾದರೆ ಅವನ ಕಣ್ಣಿಗೆ ಕಾಮಿನಿಯೊಂದೇ ಕಾಣುವುದು
ಇವನ ಬಾಧೆ ಶುರುವಾದ್ರೆ ಯಾರ ಬೋಧೆಯೂ ಕೇಳಿಸದು
ಜಗತ್ತು ದುಂಡಗಿದೆ ಎಂಬುದನ್ನು ಸಾಬೀತು ಮಾಡುವ ಪ್ರಯೋಗ ಶಾಲೆ
ಕಾಲು ಜಾರಿಸುವ ಪಸೆ ಈ ಪಿಪಾಸೆ
ಜಾರಿದವರನ್ನು ಜಾರರನ್ನಾಗಿಸುವ ಜೋರು ರೋಗ
ಇದನ್ನು ಹೆಚ್ಚಿಸಲು ಗುಳಿಗೆಗಳಿವೆ, ಕಡಿಮೆಗೊಳಿಸಲು ಇಲ್ಲ
ಉಪ್ಪು ತಿಂದ ದೇಹದೊಳಗಿನ ಮುಪ್ಪಿಲ್ಲದ ಬಯಕೆ
ರಾಮೇಶ್ವರಕ್ಕೆ ಹೋದರೂ ಬಿಡಲೊಲ್ಲದ ಕಾಮೇಶ್ವರ
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

