ಸಂಪಾದಕೀಯ

ಕಾಮ

Published On :

    ತಪ್ಪು ದಾರಿಯಲ್ಲಿ ತುಸು ದೂರ ನಡೆಸುವ ದೂತ
    ಪ್ರಾಯದ ಕಣ್ಣಿಗೆ ಬಡಿದ ಕಾಮಾಲೆ
    ಮೈಮನಗಳ ಸೆಳೆತ, ಅಂಗಾಂಗಗಳ ಕುಣಿತ
    ಶೃಂಗಾರ ಜಳಕ  ಮನಸು ಮನಸುಗಳ ಪುಳಕ
    ಛೆ..ಛೆ.. ಎನಿಸುವಷ್ಟು ಇರಬಾರದ ವಾಂಛೆ
    ಅತಿಯಾದರೆ ತುಚ್ಛವೆನಿಸುವ ಇಚ್ಛೆ
    ಮನೋ ಮಥನದಲ್ಲಿ ಜನಿಸಿದ ಮನ್ಮಥ
    ಮನದ ಮದವಿದು ಮದನನ ತನನ
    ದರ್ಪ ತೋರಿದವರ ಕಂದಕಕ್ಕೆ ತಳ್ಳುವ ಕಂದರ್ಪ
    ಅನಂಗ ಮಂಗ
    ಸ್ಮರಣೆಯನ್ನೆಲ್ಲ ನುಂಗಿ ಹಾಕುವ ಸ್ಮರ
    ಇದರ ಆವೇಶಕ್ಕೆ ತೊಟ್ಟ ವೇಷವೆಲ್ಲ ಕಳಚುವುದು
    ಪಂಚ ಬಾಣಗಳಿಂದಲೂ ಹೃದಯ ಕೊರೆಯುವ ಹಲಾಯುಧ
    ಮನದೊಳಗಿನ ಅಗ್ನಿ
    ತೊಟ್ಟರೂ ಸುಡುವ ಬಿಟ್ಟರೂ ಸುಡುವ ಸೆರಗಿನೊಳಗಿನ ಕೆಂಡ
    ಪುರುಷನ ಪೌರುಷ ನಿರ್ಧಾರವಾಗುವ ವಿಷಯಗಳಲ್ಲಿ ಒಂದು


-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.