ಸ್ತ್ರೀಯರೇಕೆ ಸೀರಿಯಲ್‌ಗಳನ್ನು ಇಷ್ಟಪಡ್ತಾರೆ?
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಸ್ತ್ರೀಯರೇಕೆ ಸೀರಿಯಲ್‌ಗಳನ್ನು ಇಷ್ಟಪಡ್ತಾರೆ?
ಅವರಿಗೆ ಸದಾ ಇನ್ನೊಬ್ಬರ ಬಗ್ಗೆಯೇ ಕುತೂಹಲ!
ಕುತ್ಪಾಡಿ ಜಯಪ್ರಕಾಶ ಹೆಗ್ಡೆ, ತೀರ್ಥಹಳ್ಳಿ
ಚುನಾವಣಾ ಅಭ್ಯರ್ಥಿಗಳ ಟಿಕೆಟ್‌ಗಾಗಿ ಆಗುವ ನೂಕುನುಗ್ಗಲಿಗೂ, ಸಿನಿಮಾ ಟಿಕೆಟ್‌ಗಾಗಿ ಆಗುವ ನೂಕುನುಗ್ಗಲಿಗೂ ಏನು ವ್ಯತ್ಯಾಸ?
ಒಂದು ಸಿನಿಮಾಸೌಧದ ಕುರ್ಚಿಗಾಗಿ, ಇನ್ನೊಂದು ವಿಧಾನಸೌಧದ ಕುರ್ಚಿಗಾಗಿ.
ರವಿಕುಮಾರ ಜಿ.ಬಿ. 9449669897
ಹುಡುಗಿಯರು ನಾಯಿಮರಿಯನ್ನೇ ಇಷ್ಟಪಡುತ್ತಾರೆ ಯಾಕೆ?
ಅವರು ಹೇಳಿದ ಹಾಗೆ ಕೇಳುತ್ತದೆ ಅದಕ್ಕೆ!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ದಾನ ಮಾಡಿದ ಕರ್ಣ ದಾನಶೂರನಾದ. ಮತದಾನ ಮಾಡುವ ಮತದಾರ ಏನಾಗಬಹುದು?
ಮತದಾನಕ್ಕೂ ಮೊದಲು ಧೀರ, ನಂತರ ಅಧೀರ.
ರಮೇಶ ಭಟ್ ಆವರ್ಸೆ, ಮೈಸೂರು, 9164276058
'ಕೇಳ್ರಪ್ಪೋ ಕೇಳಿ'ಯಲ್ಲಿ ಮೊಬೈಲ್ ನಂಬರ್ ಕೊಟ್ಟಿದ್ದೇ ತಡ ತುಂಟ ಹುಡುಗಿಯರೆಲ್ಲಾ ಕಾಲ್, ಮೆಸೇಜು ಮಾಡೋಕೆ ಶುರುಮಾಡಿದ್ದಾರಲ್ಲ?
ರಮೇಶ ಭಟ್ರು, ಮೊಬೈಲ್ ನಂಬರ್ ಕೊಟ್ರು, ಕಾಟಕ್ಕೆ ಸುಸ್ತಾಗಿ ಕುಳಿತುಬಿಟ್ರು!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

