ಪ್ರೀತಿಯ ನದಿ ಹರಿಯುತ್ತಾ ಸಾಗಿ ಸೇರುವುದೆಲ್ಲಿಗೆ?
ವಿ. ಹೇಮಂತಕುಮಾರ್, 9035992900
ಪ್ರೀತಿಯ ನದಿ ಹರಿಯುತ್ತಾ ಸಾಗಿ ಸೇರುವುದೆಲ್ಲಿಗೆ?
ಕರ್ನಾಟಕದಲ್ಲಿ ಹರಿದಿದ್ದೇ ಆದರೆ ತಮಿಳುನಾಡಿಗೇ ಸೇರಬೇಕು ಅಂದ್ರಂತೆ ಜಯಲಲಿತಾ!
ಪವನಕುಮಾರ ಕೆ.ವಿ. ಬಳ್ಳಾರಿ 9900515957
ಸರಸ ಜನನ, ವಿರಸ ಮರಣ, ಸಮರಸವೇ ಜೀವನ ಎಂಬ ಬೇಂದ್ರೆ ನುಡಿಗಳನ್ನು ಹುಟ್ಟುವ ಹೊಸಪಕ್ಷಗಳಿಗೆ ಹೋಲಿಸಬಹುದೇ?
ಆ ಪದಗಳನ್ನು ರಾಜಕೀಯಕ್ಕೆ ಎಳೆತಂದು ಬೇಂದ್ರೆ ಅಜ್ಜನ ಆತ್ಮವನ್ನೇಕೆ ನೋಯಿಸೋದು ಬಿಡೀಪ್ಪಾ...
ಶಿಲ್ಪಿರಮೇಶ್, ಸಂತೇಮಾಳ, ಬನ್ನೂರು
ರಸ್ತೆ ಚಿಕ್ಕದಾಗಿ ವಾಹನಗಳ ಸಂಚಾರ ಹೆಚ್ಚುತ್ತಿರುವಾಗ ಸಂಚಾರಿಯ ಗತಿ?
ಪರಲೋಕ ಸಂಚಾರದ ರಸ್ತೆಗಳಲ್ಲಿ
ಟ್ರಾಫಿಕ್‌ಜಾಮ್ ಇಲ್ವಂತೆ!
ವಿಷ್ಣುಶಂಕರ, ಶಿವಮೊಗ್ಗ
ನನ್ನಾಕೆಯನ್ನು ನಿರಾಭರಣ ಸುಂದರಿ ಎಂದರೂ ಕೋಪಿಸಿಕೊಳ್ಳುತ್ತಾಳಲ್ಲ?
ಆಭರಣ ಕೊಡಿಸದೇ ಇರುವುದಕ್ಕೆ ನೀವು ಪೀಠಿಕೆ ಹಾಕುತ್ತಿದ್ದರೆ ಹೇಗೆ ತಾನೇ ಸಹಿಸಿಯಾಳು?
ಕೆನ್ನಾಳು ಭಾಸ್ಕರ್ 9036416729
ದೇವತೆ ಪ್ರತ್ಯಕ್ಷಳಾದರೆ ಏನು ವರ ಕೇಳುತ್ತೀರಾ ಬಾಣಭಟ್ರೇ?
ಹಂಗೇ ಸುವರ್ಣ ನ್ಯೂಸ್‌ಗೆ ಒಂದು ಎಕ್ಸ್‌ಕ್ಲೂಸಿವ್ ಬೈಟ್ ಕೊಟ್ಬಿಡಮ್ಮ...!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

