ಸಂಪಾದಕೀಯ

ಅಲರ್ಜಿ

Published On :

ಅರ್ಜಿ ಹಾಕದೇ ಬರುವ, ನಮ್ಮೊಂದಿಗೆ ಇರುವ ವ್ಯಾಧಿಮೂಲ
    ಗಳಿಸಿದ, ಸಂಪತ್ತಿಗೊಂದು ಗತಿ ಕಾಣಿಸುವ ರೋಗ
    ಯಾವುದರ ಅಲರ್ಜಿಯಿದೆಯೊ ಅದನ್ನು ವರ್ಜಿಸುವುದೇ ಇದಕ್ಕೆ ಸರ್ಜರಿ
    ಹಳೇ ವುಲ್ಲನ್ ಬಟ್ಟೆ ಒಮ್ಮೆ ಜೊರಾಗಿ ಝಾಡಿಸಿದಾಗಲೂ ಆಕ್ಷಿ ಬರಲಿಲ್ಲವೆಂದರೆ ನಿಮಗೆ ಧೂಳಿನ ಅಲರ್ಜಿಯಿಲ್ಲವೆಂದರ್ಥ
    ಮೂಗಿನ ಸಂಬಂಧೀ ಅಲರ್ಜಿಗೆ ಮಾಗರ್ಜಿ ಎನ್ನಬಹುದು
    ಹೆಂಡತಿಯನ್ನು ಸಹಿಸಿಕೊಂಡವರಿಗೆ ಯಾವ ಅಲರ್ಜಿಯೂ ಬಾಧಿಸುವುದಿಲ್ಲ
    ಎನರ್ಜೆಟಿಕ್ ಆಗಿರಬೇಕೆಂದರೆ ಅಲರ್ಜೆಟಿಕ್‌ಗಳಿಂದ ದೂರವೇ ಇರಬೇಕು
    ಅಲರ್ಜೆಟಿಕ್‌ಗಳಿಂದ ದೂರವೇ ಇರಬೇಕೆಂದರೂ ಯಾರೂ ಹುಡುಗೀರನ್ನು ದೂರಮಾಡುವುದಿಲ್ಲ
    ಬಾಸ್‌ನಿಂದ ದೂರವಿದ್ದರೆ ಆದಷ್ಟು ಅಲರ್ಜಿಗಳಿಂದ ದೂರವಿರಬಹುದು
    ನೀವು ಪ್ರಾಮಾಣಿಕರೂ ನಿಷ್ಠುರರೂ ಆಗಿದ್ದರೆ ಲೋಕಕ್ಕೇ ಅಲರ್ಜಿಗಳಾಗುತ್ತೀರಿ
    ಜೀ...ಜೀ.. ಎಂದು ಬಕೆಟ್ ಹಿಡಿದ ಮನಸ್ಸು ಕೂಡ ಸಮಾಜಕ್ಕೆ ಅಲರ್ಜಿಯೇ
    ಇದಕ್ಕೆ ಮಾತ್ರೆ ತೆಗೆದುಕೊಂಡರೂ ಮಾತ್ರವೂ ಕಡಿಮೆಯಾಗದು
    ಕೆರೆತವನ್ನೂ ಕೊಟ್ಟು ಊತವನ್ನೂ ಉಂಟು ಮಾಡುವಂಥದ್ದು
    ಗಾಳಿಯಲ್ಲಿ ಆಮ್ಲಜನಕ, ಸಾರಜನಕಗಳಲ್ಲದೇ 'ಅಲರ್ಜನ'ಕಗಳೂ ಇರುತ್ತದೆ

-ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.