ಹುಡುಗಿ
ಫೇಸ್ ಬುಕ್ಕಿನಲ್ಲಿ ಅತಿ ಹೆಚ್ಚು ಲೈಕ್, ಕಮೆಂಟ್‌ಗಳನ್ನು ಗಿಟ್ಟಿಸುವವಳು
ಈಕೆಯ ಸೌಂದರ್ಯಕ್ಕೆ ಬೇರೆಯವರನ್ನು ಮೂರ್ಖರಾಗಿಸುವ ಮತ್ತು ತನ್ನ ಮೂರ್ಖತ್ವವನ್ನು ಮುಚ್ಚಿಕೊಳ್ಳುವ ತಾಖತ್ತಿದೆ
ಅರಳುವ ಹೂವು (ದುಂಬಿಗಳು) ಮುತ್ತಲು ಬಂದರೆ ಕೆರಳುವ ಹಾವು
ಜಡೆಗೆ ಮರುಳಾದವನ ಬದುಕು ಜಡಕು
ನೋಡಲು ಚೆಂದ ಮತ್ತು ನೋಡಲಷ್ಟೇ ಚೆಂದ
ಹುಡುಗರ ಕಣ್ಣಿನ ಸಾರ್ಥಕತೆ
ಗಜದಂತೆ ಬಳುಕು, ಗಾಜಿನಂತೆ ನಾಜೂಕು
ಚೂರು ಎಡವಟ್ಟಾದರೆ ಎಲ್ಲ 'ವರಿ'ಗಳಿಗೂ ಮೂಲ ಕಾರಣ- ಈ ಕುವರಿ
ಹುಡುಗರನ್ನು ಕವಿಯಾಗಿಸಿ ಕಪಿಯಾಗಿಸುವವಳು
ಒಮ್ಮೆ ಈಕೆಯನ್ನು ಪಟಾಯಿಸಿದೆವೆಂದು ಬೀಗಿದವರೆಲ್ಲ ಗಾಳಿಪಟವಾಗಿ ಬಿಡುತ್ತಾರೆ
ನಿತ್ಯವೂ ಕಾಲೇಜಿಗೆ ಹೋದರೆ ಏನು ಸಿಗುತ್ತದೆ ಎಂಬುದಕ್ಕೆ ಉತ್ತರ ಇವಳು
ಬೆಳೆಯುವ ಹುಡುಗಿಗೆ ಕಾಲುಬುಡ ಕಾಣದು. ಕಂಡರೆ ಅವಳು ಬೆಳೆದಿಲ್ಲ ಎಂದರ್ಥ
ಹರೆಯದಲ್ಲಿ ಕತ್ತೆಯೂ ಸುಂದರ ಎಂಬುದಕ್ಕೆ ಇವಳನ್ನೇ ಉದಾಹರಣೆಯಾಗಿ ಕೊಡುತ್ತಾರೆ
ಬ್ರಹ್ಮನೆಂಬ ಬಡಗಿಯ ಸುಂದರ ಶಿಲ್ಪ- ಹುಡುಗಿ
ಆರತಿಗೊಬ್ಬಳು, ಈ ರತಿಗೂ ಇವಳೊಬ್ಬಳೇ
-ವಿಶ್ವನಾಥ ಸುಂಕಸಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

