ಗಂಡಸರು ಅನುಭವಿಸುವ ನೋವುಗಳ ಹಿಂದೆ ಒಬ್ಬ ಹೆಂಗಸಿರುತ್ತಾಳಾ?
ಆರೀಫ್ 9964280609
ಹುಡುಗಿಯರ ಮನಸ್ಸು ಗಡಿಯಾರದ ಮುಳ್ಳಿನ ಥರ ಪ್ರತಿ ಕ್ಷಣಕ್ಕೂ ಬದಲಾಗುವುದೇಕೆ?
ಕಾಲದೊಂದಿಗೆ ನಾವು ಬದಲಾಗಬೇಕು ಎಂಬ ಮಾತನ್ನು ಹಾಗೆ ಪಾಲಿಸುತ್ತಿದ್ದಿರಬಹುದು!
ರವಿಕುಮಾರ್ ಜಿ.ಬಿ. 9449669897
ಪತ್ರಿಕೆಯಲ್ಲಿ 'ಬೈಟು ಕಾಫಿ' ಶುರುವಾದ ಮೇಲೆ ಹೊಟೇಲ್ನಲ್ಲಿ ಬೈಟು ಕೊಡುತ್ತಿಲ್ಲವಲ್ಲ?
ಫುಲ್ಕಪ್ ಕಾಫಿ ಹೀರಿ ಮುಗಿಸುವವರೆಗೂ ಓದುವಷ್ಟು ಸರಕು ಬೈಟುಕಾಫಿ ಪುರವಣಿಯಲ್ಲಿದೆ ಅಂತ ಅವರಿಗೂ ತಿಳಿದಿದೆ!
ಹರಳಹಳ್ಳಿ ಪುಟ್ಟರಾಜು, 9632838088
ಗಂಡಸರು ಅನುಭವಿಸುವ ನೋವುಗಳ ಹಿಂದೆ ಒಬ್ಬ ಹೆಂಗಸಿರುತ್ತಾಳಾ?
ಪ್ರತಿ ಹೆಂಗಸಿನ ಹೆರಿಗೆ ನೋವಿನ ಹಿಂದೆ ಒಬ್ಬ ಗಂಡಸಿರುತ್ತಾನೆ ಎಂಬುದಷ್ಟೇ ಇದುವರೆಗೆ ಸಾಬೀತಾಗಿರುವ ಅಂಶ!
ಬಿ. ಎಂ. ಪರಶಿವಮೂರ್ತಿ, ಬೆಂಗಳೂರು
ಸೆಕ್ಸ್ ಗೊತ್ತು, ಸೆನ್ಸೆಕ್ಸ್ ಗೊತ್ತು. ಇದೇನಿದು ಸಮ್ಮತಿ ಸೆಕ್ಸ್?
ನಿಮ್ಮ ಸಮ್ಮತಿ ಇಲ್ಲದೇ ಸೆನ್ಸೆಕ್ಸ್ ಎರ್ರಾಬಿರ್ರಿ ಏರಿಳಿಯುತ್ತದೆ. ಅದನ್ನೇ ಮೊದಲನೆಯದಕ್ಕೂ ಅನ್ವಯಿಸುವುದಕ್ಕೆ ಹೋಗಬೇಡಿ ಎಂಬ ತಾತ್ಪರ್ಯ!
ಕಾಳೀಹುಂಡಿ ಶಿವಕುಮಾರ್, ಮೈಸೂರು 9844883581
ಸತ್ತಾಗ ಅಳುವ ಮಂದಿ ಕಡಿಮೆಯಾಗುತ್ತಿದ್ದಾರಲ್ಲ?
ತೊಟ್ಟಿಲು ಕಟ್ಟಿದಾಗ ನಗುವ ಮಂದಿಯೂ ಕಡಿಮೆಯಾಗುತ್ತಿದ್ದಾರೆ!
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

