ಉತ್ತರ ಕನ್ನಡ

ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

Published On :

ಅಂಕೋಲಾ: ರೋಟರಿ ಕ್ಲಬ್ ಅಂಕೋಲಾದ ನೂತನ ಅಧ್ಯಕ್ಷರಾಗಿ ಡಾ. ಸಂಜೀವ ನವಲ್ಯಾಳ್, ಕಾರ್ಯದರ್ಶಿಯಾಗಿ ನಾರಾಯಣ ಡಿ. ನಾಯಕ ಅವರು ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
ಹಿರಿಯ ಸಾಹಿತಿ ವಿಷ್ಣು ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗದ ಜಾಡ್ಯವನ್ನು ಜಾಡಿಸುವ ರೋಟರಿ ಸಂಸ್ಥೆ ತುಳಿತಕ್ಕೊಳಗಾದವರ ಬದುಕಿಗೆ ಬೆಸುಗೆ ಬೆಸೆಯುವ ಕೊಂಡಿಯಾಗಿ ಗಟ್ಟಿಗೊಂಡಿದೆ. ರೋಟರಿ ಸಂಸ್ಥೆ ತನ್ನ ನಿರಂತರ ಚಲನಶೀಲತೆಯೊಂದಿಗೆ ಭೂಮಂಡಲವನ್ನು ಸುತ್ತುವರಿದಿದ್ದು, ನೆಲೆ ಕಳೆದುಕೊಂಡವರ ಪಾಲಿಗೆ ಬೆಳಕು ಚೆಲ್ಲಿದೆ ಎಂದರು.
ಕಾರವಾರದ ಚೇಂಬರ್ ಆಪ್ ಕಾಮರ್ಸ್‌ನ ನಿಕಟಪೂರ್ವ ಅಧ್ಯಕ್ಷ ಜೀತೇಂದ್ರ ತನ್ನಾ ಮಾತನಾಡಿ, ಅಂಕೋಲಾ ರೋಟರಿ ಸಂಸ್ಥೆ ಪದಾರ್ಪಣೆಯೊಂದಿಗೆ ಪ್ರಗತಿ ಪಥದಲ್ಲಿ ಮುನ್ನುಗ್ಗುತ್ತಿದ್ದು, ಸಾಧನೆಯ ಮೈಲುಗಲ್ಲುಗಳನ್ನು ನಿಲ್ಲಿಸತೊಡಗಿದೆ ಎಂದರು.
ರೋಟರಿ ಅಸಿಸ್ಟಂಟ್ ಗವರ್ನರ್ ಸತೀಶ ನಾಯ್ಕ ಮಾತನಾಡಿ, ಆತ್ಮವಿಶ್ವಾಸದ ಬಲ ಕಳೆದುಕೊಂಡವರಿಗೆ ಪ್ರೀತಿ-ವಿಶ್ವಾಸದ ಸೆಲೆಯಾಗಿ ಅಂಕೋಲಾ ರೋಟರಿ ಸಂಸ್ಥೆ ಅತ್ಯುತ್ತಮ ಸೇವೆಗೆ ಮುಂದಾಗಿದೆ ಎಂದರು. ರೋಟರಿ ನಿಕಟಪೂರ್ವ ಅಧ್ಯಕ್ಷ ಮಂಗಲದಾಸ ಕಾಮತ ರೋಟರಿ ಸಂಸ್ಥೆ ನೀಡಿದ ಸೇವೆಯ ಕುರಿತು ವಿವರಿಸಿದರು. ನಿಕಟಪೂರ್ವ ಕಾರ್ಯದರ್ಶಿ ಜಿ.ಎಲ್. ಸಂಜಯ ತಮ್ಮ ಅಧಿಕಾರಾವಧಿಯಲ್ಲಿ ಸಲ್ಲಿಸಿದ ಸೇವೆಯ ವರದಿಯನ್ನು ವಿವರಿಸಿದರು. ನ್ಯಾಯವಾದಿ ನಾಗಾನಂದ ಬಂಟ ಪ್ರಾರ್ಥಿಸಿದರು. ಪದ್ಮನಾಭ ಪ್ರಭು, ರಾಜೇಂದ್ರ ಶೆಟ್ಟಿ, ಡಾ. ಕೃಷ್ಣ ಪ್ರಭು ಅತಿಥಿಗಳನ್ನು ಪರಿಚಯಿಸಿದರು. ರೋಟರಿಯ ಸದಸ್ಯರಾಗಿ ನ್ಯಾಯವಾದಿ ವಿನೋದ ಶಾನಭಾಗ, ಡಾ. ಸುಬ್ರಾಯ ಬಂಟ, ನವೀನಚಂದ್ರ ಹೆಗಡೆ ಅವರನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ನ್ಯಾಯವಾದಿ ಸುಹಾಸ ಶೆಟ್ಟಿ ವರದಿ ವಾಚಿಸಿದರು. ಡಾ. ಅವಿನಾಶ ತಿನೈಕರ ನಿರೂಪಿಸಿದರು. ಕಾರ್ಯದರ್ಶಿ ನಾರಾಯಣ ಡಿ. ನಾಯಕ ವಂದಿಸಿದರು. ಡಾ. ಡಿ.ಎಲ್. ಭಟ್ಕಳ, ವಿ.ಆರ್. ವೆರ್ಣೇಕರ, ಸುಭಾಶ ನಾರ್ವೇಕರ, ಚಂದ್ರಕಾಂತ ನಾಯ್ಕ, ಭಾಸ್ಕರ ನಾರ್ವೇಕರ, ನಾಗೇಶ ಡಿ. ಪ್ರಭು, ಸುರೇಶ ಭಟ್ ಕುಮಟಾ, ಪ್ರಕಾಶ ಇಡೂರಕರ, ಬಿ.ವಿ. ನಾಯಕ, ಎನ್.ಡಿ. ಅಂಕೋಲೆಕರ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಡ ವರ್ಗದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.