ಉತ್ತರ ಕನ್ನಡ

ಪೌರಾಣಿಕ ಯಕ್ಷಗಾನ ಪ್ರದರ್ಶನ

Published On :

ದಾಂಡೇಲಿ: ದಾಂಡೇಲಿಯ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯವರಿಂದ ನಗರದ ವಿದ್ಯಾಧಿರಾಜ್ ಸಭಾಭವನದಲ್ಲಿ ನಡೆದ ಭಸ್ಮಾಸುರ ಮೋಹಿನಿ ಹಾಗೂ ಕೀಚಕ ವಧೆ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಯಿತು.
ಹಿಮ್ಮೇಳದಲ್ಲಿ ಖ್ಯಾತ ಭಾಗವತರಾದ ಜಿ. ರಾಘವೇಂದ್ರಮಯ್ಯ ಹಾಲಾಡಿ, ಬೆಳ್ವೆ ಗಣೇಶ ಶೆಟ್ಟಿ ಹಾಗೂ ವಿಷ್ಣುಮೂರ್ತಿರಾವ್, ದಾಂಡೇಲಿರವರ ಹಾಡುಗಾರಿಕೆ ಇಂಪಾಗಿತ್ತು. ಸುಬ್ರಹ್ಮಣ್ಯ ಮೂರೂರು ಮೃದಂಗ ಹಾಗೂ ಸುಬ್ರಹ್ಮಣ್ಯ ಭಂಡಾರಿಯವರ ಚಂಡೆವಾದನವೂ ಮಧುರವಾಗಿತ್ತು.
ಮುಮ್ಮೇಳದಲ್ಲಿ ಅತಿಥಿ ಕಲಾವಿದರಾಗಿ ಆಗಮಿಸಿದ್ದ ವಿದ್ಯಾಧರ ಜಲವಳ್ಳಿಯವರ ಕೀಚಕನ ಪಾತ್ರ ಮನಮೋಹಕವಾಗಿತ್ತು. ಇವರ ಜೊತೆಗೆ ಹಾಸ್ಯ ಪಾತ್ರದಲ್ಲಿ ಅಭಿನಯಿಸಿದ್ದ ಹಾಸ್ಯ ಕಲಾವಿದ ರಮೇಶ ಭಂಡಾರಿಯವರ ಅಭಿನಯ ಮತ್ತು ಮಾತುಗಾರಿಕೆ ಸೇರಿದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತ್ತು. ಭಸ್ಮಾಸುರನಾಗಿ ಕೋಡಿ ವಿಶ್ವನಾಥ ಗಾಣಿಗ, ವಲಲನಾಗಿ ಪ್ರಸನ್ನ ಶೆಟ್ಟಿಗಾರ ಅವರ ಅಭಿನಯವೂ ಮೆಚ್ಚುಗೆ ಪಡೆಯಿತು.
ಉಳಿದಂತೆ ಪ್ರಮುಖ ಪಾತ್ರದಲ್ಲಿ ಜನಾರ್ಧನ ಗುಡಿಗಾರ, ಕೊಳಾಳಿ ಕೃಷ್ಣ ಶೆಟ್ಟಿ, ಅಜ್ರಿ ಅರುಣ ಶೆಟ್ಟಿ, ಪ್ರಸನ್ನ ಆಚಾರ್ಯ, ಉಪ್ಪುಂದ ಕೃಷ್ಣ ದೇವಾಡಿಗ, ಕೇಶವ ಆಚಾರ್ಯ, ಕು. ಅಜಂತಾರವರು ಉತ್ತಮವಾಗಿ ಅಭಿನಯಿಸಿದರು. ಸ್ತ್ರೀಪಾತ್ರದಲ್ಲಿ ಹೆನ್ನಾಬೈಲು ಸಂಜೀವ ಶೆಟ್ಟಿ, ಹಕ್ಲಾಡಿ ರವೀಂದ್ರ ಶೆಟ್ಟಿ, ಕೃಷ್ಣ ಗಾಣಿಗ ಹೊಸಂಗಡಿಯವರ ಅಭಿನಯ ಮನಮೋಹಕವಾಗಿತ್ತು.  ಹಾಸ್ಯಪಾತ್ರದಲ್ಲಿ ಕಡಬಾ ಪೂವಪ್ಪ, ಉಳ್ಳೂರು ಶಂಕರ ನಾಯ್ಕ, ಚಂದ್ರ ಕಲಾಲರವರು ಪ್ರೇಕ್ಷಕರನ್ನು ನಗಿಸಿದರು.
ದಾಂಡೇಲಿಯಲ್ಲಿ ಕಲಾಶ್ರೀ ಸಂಸ್ಥೆ ಪ್ರತಿವರ್ಷ ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಎರಡು ಯಕ್ಷಗಾನಗಳನ್ನು ಉಚಿತವಾಗಿ ನೀಡುತ್ತಿದ್ದು, ಇದು ಕೂಡಾ ಉಚಿತ ಪ್ರದರ್ಶನವಾಗಿತ್ತು.  ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಶೆಟ್ಟಿ, ಉಪಾಧ್ಯಕ್ಷ ಸುರೇಶ ಕಾಮತ್, ವಿಷ್ಣುಮೂರ್ತಿರಾವ್, ಪ್ರ. ಕಾರ್ಯದರ್ಶಿ ಕೀತರ್ ಗಾಂವಕರ, ಕೋಶಾಧ್ಯಕ್ಷ ಪ್ರಮೋದ ಶಾನಭಾಗ, ಸಂಘಟನಾ ಕಾರ್ಯದರ್ಶಿ ರಾಮಣ್ಣ ಹೆಬ್ಬಾರ, ಪದಾಧಿಕರಿಗಳಾದ ಬಿ.ಎನ್. ವಾಸರೆ, ಗಣೇಶ ಹೆಬ್ಬಾರ, ಚಂದ್ರು ಶೆಟ್ಟಿ, ವಿಶ್ವನಾಥ ಶೆಟ್ಟಿ, ರೋಷನ್ ಬಾವಾಜಿ, ಸುಧಾಕರ ಶೆಟ್ಟಿ, ಮೊಗವೀರ, ನಾಗರಾಜ ಶೆಟ್ಟಿ, ಉದಯ ಶೆಟ್ಟಿ, ಶೇಖರ ಪೂಜಾರ ಸೇರಿದಂತೆ ಹಲವರು  ಯಕ್ಷಗಾನ ಸಂಘಟನೆಯಲ್ಲಿ ಸಹಕರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.