ಉತ್ತರ ಕನ್ನಡ

ಅಡುಗೆ ಒಲೆ ಪ್ರಾತ್ಯಕ್ಷಿಕೆ

Published On :

ಯಲ್ಲಾಪುರ: ಧ.ಗ್ರಾ.ಯೋ ರಿಯಾಯತಿ ದರದಲ್ಲಿ ನೀಡುತ್ತಿರುವ ಹೊಗೆರಹಿತ-ಕಡಿಮೆ ಉರುವಲು ಬಳಕೆಯ ಅಡುಗೆ ಒಲೆಯ ಪ್ರಾತ್ಯಕ್ಷಿಕೆಯನ್ನು ಇತ್ತೀಚೆಗೆ ತಾಲೂಕಿನ ಉಮ್ಮಚಗಿಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಿ.ಜಿ. ಶೆಟ್ಟಿ ಉದ್ಘಾಟಿಸಿದರು. ಸೇವಾ ಪ್ರತಿನಿಧಿ ಸರಸ್ವತಿ ಪಟಗಾರ ಒಲೆಯ ಕುರಿತು ಮಾಹಿತಿ ನೀಡಿದರು. ಗ್ರಾಪಂ ಸದಸ್ಯರಾದ ವಿದ್ಯಾ ಹೆಗಡೆ, ಸರಸ್ವತಿ ಪಟಗಾರ, ಸುರೇಶ ಪೂಜಾರಿ ಉಪಸ್ಥಿತರಿದ್ದರು.
ಹೆಜ್ಜೇನು ಕಾಡಿಗೆ: ಪ್ರಾತ್ಯಕ್ಷಿಕೆ
ಯಲ್ಲಾಪುರ: ಕರ್ತವ್ಯವನ್ನು ಶ್ರದ್ಧಾಪೂರ್ವಕ ನಿರ್ವಹಿಸಿದಾಗ ಗೌರವ ತಾನಾಗಿಯೇ ದೊರಕುವುದೆಂದು ಯಲ್ಲಾಪುರದ ಹೆಜ್ಜೇನು ತಜ್ಞ ರಾಮಾ ಮರಾಠಿ ಹೇಳಿದರು. ಇತ್ತೀಚೆಗೆ ಕುಮಟಾದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹೆಜ್ಜೇನು ಗೂಡುಗಳನ್ನು ಮರದಿಂದ ತೆಗೆದು, ಕಾಡಿಗೆ ಮರಳಿ ಬಿಡುವ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು. ಇವರಿಗೆ ಸಹಾಯಕರಾಗಿ ಆರ್.ಜಿ. ಭಟ್ಟ ಬೆಳಸೂರು, ತುಕಾರಾಮ ಮರಾಠಿ ಕಾರ್ಯನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.