2ನೇ ಹಂತದ ಕಾಮಗಾರಿ ಬೇಡ
ಅಂಕೋಲಾ: ಸೀಬರ್ಡ್ ನಿರಾಶ್ರಿತರಿಗೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಪರಿಹಾರದ ಮೊತ್ತ ಕೈಸೇರುವ ಮುನ್ನವೇ ಎರಡನೇ ಹಂತದ ಕಾಮಗಾರಿಗೆ ಮುಂದಾಗಿರುವ ನೌಕಾನೆಲೆಯವರ ಕ್ರಮವನ್ನು ಸೀಬರ್ಡ್ ನಿರಾಶ್ರಿತರ ಸಂಘದ ಎನ್.ವಿ. ನಾಯಕ ಖಂಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೀಬರ್ಡ್ ನಿರಾಶ್ರಿತರು 28 ವರ್ಷಗಳಿಂದ ಹೆಚ್ಚಿನ ಭೂ ಪರಿಹಾರ ನೀಡುವಂತೆ ಒತ್ತಾಯಿಸುತ್ತಿರುವ ಬೆನ್ನಲ್ಲೇ ಎರಡನೇ ಹಂತದ ಕಾಮಗಾರಿಗೆ ಮುಂದಾಗಿದ್ದಾರೆ. ಸುಪ್ರೀಂಕೋರ್ಟ್ ಆದೇಶವನ್ನು ಗಾಳಿಗೆ ತೂರಿ ನಿರಾಶ್ರಿತರ ಮೇಲೆ ಬಲ ಪ್ರಯೋಗ ಮಾಡುತ್ತಿರುವ ನೌಕಾನೆಲೆಯವರ ಕಾರ್ಯ ಸರಿಯಲ್ಲ.
ಈ ಬಗ್ಗೆ ಶಾಸಕರು ಬೆಂಗಳೂರಿನಲ್ಲಿ ನಡೆದ ಕಂದಾಯ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿಯವರ ಸಭೆಯಲ್ಲಿ ನಿರಾಶ್ರಿತರ ಸಮಸ್ಯೆಗಳನ್ನು ವಿವರಿಸಿದ್ದಾರೆ. ಭೂಸ್ವಾಧೀನ ಕಾಯ್ದೆ 28ಎ ಪ್ರಕಾರ ಹೆಚ್ಚುವರಿ ಭೂಸ್ವಾಧೀನಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗಿರುವ 1200ಕ್ಕೂ ಹೆಚ್ಚು ಪ್ರಕರಣಗಳಲ್ಲಿ 300 ಪ್ರಕರಣಗಳು ಮಾತ್ರ ಅಂತಿಮ ತೀರ್ಪು ಪಡೆದಿದ್ದು, ಉಳಿದ ಪ್ರಕರಣಗಳು ವಿಚಾರಣೆಗೊಳಗಾಗದೆ ಹಾಗೆಯೇ ಉಳಿದಿವೆ. ಇಂತಹ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕೆಂದು ಹೇಳಿದರು. ತಾಲೂಕಿನ ಬೇರೆಡೆ ಸೀಬರ್ಡ್ನವರು ಬೇಲಿ ಹಾಕಿ ತಡೆಯೊಡ್ಡಿದಂತಾಗಿದೆ. ಇದರಿಂದ ಕೃಷಿ ಕಾರ್ಯಕ್ಕೂ ತೊಡಕಾಗಿದೆ. ಕೂಡಲೇ ಪರಿಹಾರ ಒದಗಿಸುವಂತೆ ಕೇಳಿಕೊಂಡರು. ಮಂಜೇಶ್ವರ ನಾಯಕ, ಆರ್.ವಿ. ನಾಯಕ, ಪುರುಷೋತ್ತಮ ನಾಯ್ಕ, ಗಣೇಶ ಗೌಡ, ವಸಂತ ನಾಯಕ, ವಿಶ್ವನಾಥ ನಾಯ್ಕ, ಮಂಜುನಾಥ ನಾಯ್ಕ, ಸುರೇಶ ನಾಯ್ಕ, ಸಂಜಯ ನಾಯ್ಕ, ಜಯಪ್ರಕಾಶ ನಾಯ್ಕ, ಮುಂತಾದವರಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

