ಗೋಕರ್ಣ ಮೂಲತತ್ವ ಕಾಪಾಡಿಕೊಂಡಿದೆ
ಕನ್ನಡಪ್ರಭ ವಾರ್ತೆ, ಗೋಕರ್ಣ ಜು. 23
ಎಷ್ಟೋ ಪುರಾತನ ಯಾತ್ರಾ ಕ್ಷೇತ್ರಗಳು ಆಧುನಿಕ ಪ್ರವಾಸಿ ಸ್ಥಳಗಳಾಗಿ ಪರಿವರ್ತಿತವಾಗುವ ಭರಾಟೆಯಲ್ಲಿ ತನ್ನ ಮೂಲತ್ವವನ್ನು ಕಳೆದುಕೊಂಡಿವೆ. ಆದರೆ ಗೋಕರ್ಣ ಮಾತ್ರ ಇವತ್ತಿಗೂ ತನ್ನ ವೇದ-ಸಂಸ್ಕೃತದ ಮೂಲತತ್ವವನ್ನು ಕಾಪಾಡಿಕೊಂಡು ಬಂದಿದೆ ಎಂದು ಇಲ್ಲಿನ ಹಿರಿಯ ವೈದ್ಯ ಮತ್ತು ವಿಶ್ವಹಿಂದೂ ಪರಿಷತ್ ಪ್ರಮುಖ ಡಾ. ಎಸ್.ವಿ. ಜಠಾರ್ ತಿಳಿಸಿದರು.
ಇಲ್ಲಿನ ಹವ್ಯಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಉಳಿದ ನಗರಗಳಂತೆ ಗೋಕರ್ಣದಲ್ಲಿಯೂ ವೃದ್ಧಾಶ್ರಮದ ಮತ್ತು ವೃದ್ಧರ ಶುಶ್ರೂಷೆ ಮಾಡುವ ನರ್ಸ್ಗಳ ಅವಶ್ಯಕತೆ ಹೆಚ್ಚಾಗುತ್ತಿದೆ. ಈ ಬಗ್ಗೆ ತಾವು ಕೈಗೊಂಡ ಪ್ರಯೋಗಗಳನ್ನು ವಿವರಿಸಿದ ಅವರು ಸ್ಥಳೀಯ ಪ್ರಮುಖರು ಈ ಬಗ್ಗೆ ಯೋಚಿಸುವಂತೆ ಆಗ್ರಹಿಸಿದರು. ಸಂಘದ ಅಧ್ಯಕ್ಷ ಪ್ರೊ .ಕೆ.ಜಿ. ಗುಣಿ ದೊಡ್ಡ ದೊಡ್ಡ ನಗರಗಳಲ್ಲಿ ಕ್ಲಿನಿಕ್ ತೆರೆಯುವ ಅವಕಾಶ ಬಂದಾಗ ಅದನ್ನು ತಿರಸ್ಕರಿಸಿ ಆರು ದಶಕಗಳಿಂದ ಗೋಕರ್ಣ ಮತ್ತು ಗ್ರಾಮಾಂತರ ಭಾಗದಲ್ಲಿ ವೈದ್ಯಕೀಯ ಸೇವೆಯನ್ನು ಜನಸೇವೆ ಬಗೆಯಲ್ಲಿ ಮಾಡುತ್ತ ಬಂದ ಡಾ. ಜಠಾರ ಅವರ ವಿಶೇಷತೆಗಳನ್ನು ಬಣ್ಣಿಸಿದರು. ರಮೇಶ ಪ್ರಸಾದ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ವೇ. ರಾಮಕೃಷ್ಣ ಶಂಕರಲಿಂಗ, ವೇ. ನರಸಿಂಹ ವಿ. ಶಾಸ್ತ್ರಿ ಮತ್ತು ನಿವೃತ್ತ ಶಿಕ್ಷಕ ನಾರಾಯಣ ಪಂಡಿತ ಭಾಗವಹಿಸಿದರು. ವಸಂತರಾಜನ್ ಕೊಡ್ಲೆಕೆರೆ, ಚಂದ್ರಮತಿ ಸಭಾಹಿತ, ಪ್ರಭಾಕರ ಪ್ರಸಾದ ನಿರ್ವಹಿಸಿದರು.
ಇಂದು ಕಾರ್ಯಾಗಾರ
ಶಿರಸಿ: ಇಲ್ಲಿನ ಮಧುವನ ಹೋಟೆಲ್ ಆರಾಧನಾ ಸಭಾಂಗಣದಲ್ಲಿ ಜು. 24ರಂದು ಬೆಳಗ್ಗೆ 10ಕ್ಕೆ ರಫ್ತು ಕುರಿತ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ತರಬೇತಿಯಲ್ಲಿ ರಫ್ತು ವ್ಯವಹಾರ ಏಕೆ, ಹೇಗೆ, ಎಲ್ಲಿಗೆ ಹಾಗೂ ನಮ್ಮ ಜಿಲ್ಲೆಯಿಂದ ಯಾವ ಸಾಮಗ್ರಿಗಳನ್ನು ರಫ್ತು ಮಾಡಬಹುದು, ರಫ್ತು ಮಾಡಲು ಇರುವ ನಿಬಂಧನೆಗಳು ಯಾವವು ಎಂಬಿತ್ಯಾದಿ ವಿವರಗಳೊಡನೆ ರಫ್ತು ನಿರ್ವಹಣೆಯಲ್ಲಿ ವಿವಿಧ ಹೆಜ್ಜೆಗಳ ಕುರಿತು ತಾಂತ್ರಿಕ ಅಧಿವೇಶನಗಳನ್ನು ನಡೆಸಿ ಕೃಷಿಕರಿಗೆ ವ್ಯವಹಾರಸ್ಥರಿಗೆ, ಉದ್ದಿಮೆದಾರರಿಗೆ, ಕೈಗಾರಿಕೋದ್ಯಮಿಗಳಿಗೆ ಸಮಗ್ರವಾಗಿ ತಿಳಿಸಿ ಕೊಡಲಾಗುವುದು.
ಪ್ರಗತಿಪರ ರೈತರು, ಉದ್ಧಿಮೆದಾರರು, ಕೈಗಾರಿಕೋದ್ಯಮಿಗಳು, ವ್ಯವಹಾರಸ್ಥರು, ಕೃಷಿಕರು ಹಾಗೂ ತೋಟಗಾರಿಕಾ ಬೆಳೆಗಾರರು ಇದರ ಉಪಯೋಗ ಮಾಡಿಕೊಳ್ಳಬಹುದಾಗಿದೆ. ಕಾರ್ಯಾಗಾರದಲ್ಲಿ ಭಾಗವಹಿಸಲುದ್ದೇಶಿಸಿರುವ ಆಸಕ್ತರು ಕದಂಬ ಮಾರ್ಕೆಟಿಂಗ್ ದೂ. 9483613900, 9036478230 ಹೆಸರು ನೋಂದಾಯಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

