ಆದೇಶದ ಸಾರಾಂಶ
ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ವರದಿ ಆಧರಿಸಿ ಈ ಅಮಾನತ್ತು ಆದೇಶ ಹೊರಡಿಸಲಾಗಿದೆ ಎಂದಿರುವ ಅವರು 4 ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ. 1. ಬಿಸಿಯೂಟದ ಆಹಾರ ಧಾನ್ಯಗಳನ್ನು ಶಾಲೆಯ ಆವರಣ ಬಿಟ್ಟು ಬೇರೆ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದು, 2. ಒಂದಾನುವೇಳೆ ಶಾಲೆಯ ದಾಸ್ತಾನು ಕೊಠಡಿ ಸುರಕ್ಷಿತವಲ್ಲ ಎಂದಿದ್ದರೆ ಶಾಲೆಯ ಎಸ್ಡಿಎಂಸಿ ಅವರ ಗಮನಕ್ಕೆ ತರಬೇಕಿತ್ತು, ಅದನ್ನು ಮಾಡಿಲ್ಲ 3. ಶಾಲೆ ಪ್ರಾರಂಭವಾಗಿ 35 ದಿನಗಳಾದರೂ ಹೊರಗಡೆ ಇರಿಸಿದ್ದ ಆಹಾರ ಧಾನ್ಯಗಳನ್ನು ಶಾಲೆಯ ದಾಸ್ತಾನು ಕೊಠಡಿಗೆ ತರದೆ ಇದ್ದುದು, ಲೆಕ್ಕ ತೋರಿಸದೆ ಇದ್ದುದು 4. ಅಕ್ಷರ ದಾಸೋಹದಿಂದ ಬಿಸಿಯೂಟಕ್ಕೆ ಪೂರೈಸಲಾದ ಅಕ್ಕಿ, ಬೆಳೆ, ಎಣ್ಣೆಯ ದಾಸ್ತಾನಿನ ಜಮಾ ತೋರಿಸದೆ ಇರುವುದು. ಈ ಪ್ರಮುಖ 4 ಅಂಶಗಳ ಆಧಾರದ ಮೇಲೆ ಅಮಾನತು ಆದೇಶ ಹೊರಡಿಸಲಾಗಿದೆ. ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಗ್ರಾಮಸ್ಥರು ಶಿಕ್ಷಣ ಇಲಾಖೆ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮ ಸ್ವಾಗತಿಸಿದ್ದು, ಈ ರೀತಿ ತಪ್ಪು ಮಾಡುವ ಶಿಕ್ಷಕರು, ಮುಖ್ಯಾಧ್ಯಾಪಕರ ಮೇಲೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

