ಉತ್ತರ ಕನ್ನಡ

ಕುಲಾಂತರಿ ದೋಷಮುಕ್ತವಾಗಿಲ್ಲ

Published On :

ಅಂಕೋಲಾ:  ಬಹುರಾಷ್ಟ್ರೀಯ ಕಂಪನಿಗಳು ಕುಲಾಂತರಿ ತಳಿಗಳ ಬೀಜವನ್ನು ಉತ್ಪಾದಿಸಿ ಮಾರುಕಟ್ಟೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಹೊರತು ಕುಲಾಂತರಿ ತಳಿ ದೋಷಗಳನ್ನು ಪರಿಹಾರ ಮಾಡದೆ ಬಡ ರೈತರ ಬದುಕಿಗೆ ಅಪಾಯ ತಂದೊಡ್ಡಿದ್ದಾರೆ ಎಂದು ಕಾರವಾರ ಕವಿವಿಯ ಕಡಲಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ವಿ.ಎನ್. ನಾಯಕ ಖೇದ ವ್ಯಕ್ತ ಪಡಿಸಿದರು.
ಅವರು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ, ಕರ್ನಾಟಕ ಸರ್ಕಾರ, ವಿಜ್ಞಾನ ಸಂಘ ಮತ್ತು ಎನ್‌ಎಸ್ಸೆಸ್ ಘಟಕ, ಜಿಸಿ ಕಾಲೇಜು ಅಂಕೋಲಾ ಇವರ ಆಶ್ರಯದಲ್ಲಿ ಪಟ್ಟಣದ ಜಿಸಿ ಕಾಲೇಜಿನ ಯುಜಿಸಿ ಸಭಾಭವನದಲ್ಲಿ  ಆಯೋಜಿಸಲಾಗಿದ್ದ 2013ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ತಳಿ ಪರಿವರ್ತಿತ ಬೆಳೆಗಳು ಮತ್ತು ಆಹಾರ ಭದ್ರತೆ ಎಂಬ ವಿಷಯದ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಆಯಾ ಹವಾಮಾನಕ್ಕೆ ಅನುಗುಣವಾದ ಹಾಗೂ ಮಾನವನಿಗೆ ಪೂರಕವಾದ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು ಎಂದರು.
ಪರಿಸರ ಮಾಲಿನ್ಯ ತಡೆಯಿರಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಜಿ.ಆರ್. ಗಣೇಶ 'ಪರಿಸರ ಪ್ರಜ್ಞೆ' ವಿಷಯದ ಕುರಿತು ಮಾತನಾಡಿ, ಪರಿಸರ ಮಾಲಿನ್ಯವನ್ನು ನಿಯಂತ್ರಣ ಮಾಡದಿದ್ದರೆ ಭೂಮಂಡಲದಲ್ಲಿನ ಜೀವಸಂಕುಲಗಳು ಬದುಕುಳಿಯಲು ಸಾಧ್ಯವಿಲ್ಲ. ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಪ್ಲಾಸ್ಟಿಕ್ ಮುಕ್ತ ಬದುಕು ನಿರ್ಮಾಣವಾಗಬೇಕು ಎಂದರು. ಗುಂಡಬಾಳ ಕ್ಯಾಶ್ಯೂಟ್ರಾನಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಆರ್.ಜಿ.ನಾಯಕ, ವಿಜ್ಞಾನ ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ಮಾತನಾಡಿ ಆತ್ಮ ವಿಶ್ವಾಸವಿದ್ದರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದರು. ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಎಸ್.ಎನ್. ಭಟ್ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಸಂಘದ ಅಧ್ಯಕ್ಷ ಪ್ರೊ. ಎಸ್.ಆರ್. ಶೀರೋಡಕರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರೊ. ಬಿ.ಆರ್. ರಾಜು ಪರಿಚಯಿಸಿದರು. ವಿದ್ಯಾರ್ಥಿಗಳಾದ ನೇಹಾ ಜೈವಂತ ಮತ್ತು ನಿವೇದಿತಾ ನಾಯಕ ನಿರೂಪಿಸಿದರು. ಗಣಿತಶಾಸ್ತ್ರದ ಮುಖ್ಯಸ್ಥ ಡಾ. ಅಶೋಕ ಕುಮಾರ ಎ. ವಂದಿಸಿದರು. ಕೈಗಾದ ಸಾರ್ವಜನಿಕ ಸಂಪರ್ಕಾಧಿಕಾರಿ ಮೋಹನ ರಾಮ, ಪ್ರೊ. ಮಕರಂದಾ ಇದ್ದರು. ಜನಜಾಗೃತಿ ಸಮಿತಿ ಎನ್‌ಪಿಸಿಎಲ್  ಕೈಗಾ ರಂಗತರಂಗ ಬಳಗದವರು ಶಕ್ತಿ ಎಂಬ ವಿಶೇಷ ರೂಪಕವನ್ನು ಪ್ರದರ್ಶಿಸಿ ವಿಜ್ಞಾನ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.