ಸಚಿವ ಆನಂದ್ ಹತಾಶ
ಭಟ್ಕಳ: ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ದಿ ನಮ್ಮ ರಾಜಕೀಯ ಗುರು ದೇಶಪಾಂಡೆ ಅವರ ವಿರುದ್ಧ ಆನಂದ ಅಸ್ನೋಟಿಕರ್ ಹಗುರವಾಗಿ ಮಾತನಾಡಿರುವುದು ಖಂಡನೀಯ. ಇದು ಅವರ ಹತಾಶ ಭಾವನೆ ತೋರಿಸುತ್ತದೆ ಎಂದು ಶಾಸಕ ಜೆ.ಡಿ. ನಾಯ್ಕ ಹೇಳಿದರು. ಅವರು ಭಾನುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆನಂದ ಅಸ್ನೋಟಿಕರ್ ಕುಟುಂಬಕ್ಕೆ ಕಾಂಗ್ರೆಸ್ ರಾಜಕೀಯ ನೆಲೆ ನೀಡಿದ್ದನ್ನೂ ಅವರು ಈಗ ಮರೆತಂತಿದೆ. ಉಂಡ ಮನೆಗೆ ದ್ರೋಹ ಬಗೆದ ಇವರ ವರ್ತನೆಗೆ ಮುಂದೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಭಟ್ಕಳ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ದಿಂದ ಸ್ಪರ್ಧಿಸಿದ 5 ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ನಾಯ್ಕ, ರಾಮಾ ಮೊಗೇರ, ವೆಂಕ್ಟಯ್ಯ ಬೈರುಮನೆ, ನಾಗೇಶ ದೇವಾಡಿಗ ಇದ್ದರು.
ಕ್ರೀಡಾ ದಿನಾಚರಣೆ
ಭಟ್ಕಳ: ನಗರದ ವಿದ್ಯಾಂಜಲಿ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಈಚೆಗೆ ನಡೆಯಿತು. ಹಾಂಗ್ಯೋ ಐಸ್ಕ್ರೀಂ ನಿರ್ದೇಶಕ ಪ್ರದೀಪ ಪೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಟ್ಕಳದಲ್ಲಿ ಉತ್ತಮ ಶಿಕ್ಷಣ ನೀಡುವ ದೃಷ್ಟಿಯಿಂದ ಭಟ್ಕಳ ಎಜ್ಯುಕೇಶನ್ ಸಂಸ್ಥೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಮುಖ್ಯ ಅತಿಥಿಯಾಗಿ ಅಮೆರಿಕಾ ನಿವಾಸಿ ವಿಮಲಾ ಪ್ರಭು, ಮಕ್ಕಳು ಓದು, ಆಟ, ಪಾಠದ ಜೊತೆಗೆ ಬರವಣಿಗೆಯನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಶಾಲೆ ಅಧ್ಯಕ್ಷ ರಾಜೇಶ ನಾಯಕ, ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಸುರೇಶ ನಾಯಕ ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಾಂಶುಪಾಲ ನರಸಿಂಹ ಮೂರ್ತಿ ಸ್ವಾಗತಿಸಿದರು. ಮುಖ್ಯಾಪಾಧ್ಯಾಪಕಿ ತೆರೆಸಾ ಫರ್ನಾಂಡಿಸ್ ವಂದಿಸಿದರು.
ಕಣ್ಣಿನ ತಪಾಸಣೆ ಶಿಬಿರ
ಭಟ್ಕಳ: ಇಲ್ಲಿನ ಉರ್ದು ಗಂಡು ಮಕ್ಕಳ ಶಾಲೆಯಲ್ಲಿ ಪ್ರಸಾದ ನೇತ್ರಾಲಯ ಉಡುಪಿ, ರೋಟರಿ ಕ್ಲಬ್ ಭಟ್ಕಳ, ಸನಾ ಆಪ್ಟಿಕಲ್ಸ್ ಭಟ್ಕಳ ಅವರ ಸಹಯೋಗದಲ್ಲಿ ಭಾನುವಾರ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯಿತು. ಶಿಬಿರದಲ್ಲಿ ನೂರಕ್ಕೂ ಅಧಿಕ ರೋಗಿಗಳು ಪಾಲ್ಗೊಂಡಿದ್ದರು. ಉಡುಪಿ ಪ್ರಸಾದ ನೇತ್ರಾಲಯದ ವೈದ್ಯ ಡಾ. ಕೃಷ್ಣ ಪ್ರಸಾದ ಮತ್ತು ಡಾ. ಸಮ್ಸೀರ ನೇತೃತ್ವದಲ್ಲಿ ಶಿಬಿರ ನಡೆಯಿತು. ಸಮಾಜ ಸೇವಕ ನಜೀರ ಕಾಶೀಂಜಿ, ಸನಾ ಆಪ್ಟಿಕಲ್ಸ್ನ ಜಬ್ಬಾರ್ ಇದ್ದರು.
ವಿಜ್ಞಾನ ದಿನಾಚರಣೆ
ಭಟ್ಕಳ: ನಗರದ ಸೊನಾರಕೇರಿ ಪ್ರೌಢಶಾಲೆಯಲ್ಲಿ ಈಚೆಗೆ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ಅಧ್ಯಕ್ಷತೆಯನ್ನು ಶಾಲೆ ಮುಖ್ಯೋಪಾಧ್ಯಾಯಕಿ ಶಾಮ್ಸದ್ ವಹಿಸಿ ವಿಜ್ಞಾನ ದಿನಾಚರಣೆ ಕುರಿತು ಮಾಹಿತಿ ನೀಡಿದರು. ವಿಜ್ಞಾನ ವಸ್ತು ಪ್ರದರ್ಶನ ಜರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

